ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ಪ
ಭಗವಂತನೆಂಬ ಆಗಸದಲಿ ಪಸರಿಸಿದಅ.ಪ.
ಚತುರಾಸ್ಯ ವಾಣಿ ಈರ್ವರು ಬೀಜ ಚಿತ್ಪ್ರ ಕೃತಿ
ಪೃಥವಿ ಕರ್ಮವು ಬೇರು ತ್ರಿಗುಣತ್ವ - ವು
ಕ್ಷಿತಿ ಜಲಾನಲ ವಾಯು ಗಗನ ಶಾಖೆಗಳಿಂದಕೆ
ಶತಕಿರಣ ಉಪಕೊಂಬೆಯೆನಿಸಿ ಕೊಂಬವು ಇದಕೆ 1
ಅಹಂಕಾರ ಬಲದಿಂದ ಅಭಿವೃದ್ಧಿ ಐದುವುದು
ಕುಸುಮ ತನ್ಮಾತ್ರ ರಸದಿ
ಸಹಿತವಾರ ಪ್ರವೃತ್ತಿ ನಿವೃತ್ತಿ ಕರ್ಮಫಲ
ಅಹರಹರ್ ಭುಂಜಿಪವು ತನ್ನಾಮ ಜೀವಖಗ 2
ನಾನು ನನ್ನದು ಎಂಬ ನೀಡ ದ್ವಯಗಳಿದಕೆ
ಹೀನ ವಿದ್ಯಾದಿ ಪಂಚಕವೆ ಸರ್ಪಗಳಲ್ಲಿ
ಶ್ರೀನಿಧಿ ಜಗನ್ನಾಥವಿಠಲ ಸಂರಕ್ಷಕನು 3
****
ರಾಗ : ಕಾಂಬೋಧಿ ತಾಳ : ಝ೦ಪೆ
ಜಗದಾಖ್ಯ ವೃಕ್ಷ
ಚಿಂತಿಪದು ಬುಧರು ।
ಭಗವಂತನೆಂಬ ಆಕಾಶದಲ್ಲಿ
ಪಸರಿಸಿದೆ ।। ಪಲ್ಲವಿ ।।
ಚತುರಾಸ್ಯ ವಾಣಿ ಈರ್ವರು
ಬೀಜ ಚಿತ್ಪ್ರಕೃತಿ ।
ಪೃಥುವಿ ಕರ್ಮವು
ಬೇರು ತ್ರಿಗುಣವು ತ್ವಚವು ।
ಕ್ಷಿತಿಜಲಾನಳ ವಾಯು
ಗಗನ ಶಾಖಗಳೇಕ ।
ಶತಿಕಿರಣ ಉಪತೊಂಬೆ
ಎನಿಸಿಕೊಂಬವು ಇದಕೆ ।। ಚರಣ ।।
ಅಹಂಕಾರ ಜಲದಿಂದ
ಅಭಿವೃದ್ಧಿ ಐದುವದು ।
ಅಹಿಕ ಸುಖ ಕುಸುಮ
ತನ್ಮಾತ್ರ ರಸದೀ ।
ಸಹಿತವಾಸ ಪ್ರವೃತ್ತಿ
ನಿವೃತ್ತಿ ಕರ್ಮ ಫಲ ।
ಅಹರಹ ಭುಂಜಿಪದು
ತನ್ನಾಮ ಜೀವ ಖಗ ।। ಚರಣ ।।
ನಾನು ನನ್ನದು ಎಂಬ
ನೀಡದ್ವಯಗಳಿದಕೆ ।
ಮಾನಾಪಮಾನಾದಿಗಳೇ ಪತ್ರವು ।
ಹೀನ ವಿದ್ಯಾದಿ
ಪಂಚಕವೇ ಸರ್ಪಗಳಲ್ಲಿ ।
ಶ್ರೀನಿಧಿ ಜಗನ್ನಾಥವಿಠ್ಠಲ
ಸಂರಕ್ಷನು ।। ಚರಣ ।।
****