..
ಕೋಲ ಕೋಲನ್ನ ಕೋಲ ಕೋಲ ಕೋಲನ್ನ ಕೋಲಕೋಲ ಹೊಯ್ದುಪಾಡಿ ನಮ್ಮ ಜಾಣರಂಗಗೆ ಪ.
ಲೋಕನಾಯಕ ವ್ಯಾಸ ಮುನಿಗಳಿಗೆ ಏಕೋ ಭಾವದಿಂದ ನಮಿಸಿಹಾಕಿರೆಮ್ಮ ಕೋಲ ಹೊಯ್ದುವಾಕ್ಯಗೆಲಿಸೆಂದು1
ಮಿತ್ರೆ ರುಕ್ಮಿಣಿದೇವಿ ಕರೆದುಮಿತ್ರಾದಿಗಳಿಗೆ ಹೇಳಿದಳುಮುತ್ತಿನ ಕೋಲ ತೊಳಿಯಿರವ್ವಉತ್ತಮ ಜಲದೊಳು 2
ರಾಸ ಕ್ರೀಡೆಯಲ್ಲಿ ವನಿತೆಯರುವಾಸುದೇವ ಪಿಡಿದ ಕೋಲ ಸೋಸಿಲೆ ಪೂಜಿಸಿರಮ್ಮಲೇಸು ಕೊಡಲೆಂದು 3
ಮಂದಗಮನೆಯರೆಲ್ಲ ಕೋಲಿಗೆ ಗಂಧ ಅಕ್ಷತೆ ಏರಿಸಿರೆ ಮುಂದಾಗಿ ಬಲಗೊಳ್ಳಿರೆಲ್ಲವೃಂದಾರಕರನ್ನ4
ನಲ್ಲೆಯರು ಮುತ್ತಿನ ಕೋಲಿಗೆ ಮಲ್ಲಿಗೆ ಸಂಪಿಗೆ ಏರಿಸಿರೆಎಲ್ಲಾ ಫಲಗಳಿಟ್ಟು ಕೈಯ್ಯನಲ್ಲೆಯರು ಮುಗಿದಿರೆ 5
ಜಾಣೆಯರು ನೀವೆಲ್ಲ ಮೊದಲೆವಾಣಿಯ ಬಲಗೊಳ್ಳಿರೆ ಕಲ್ಯಾಣವಾಗಲೆಂದು ಕೈಯ್ಯಮಾಣಗೆ ಮುಗಿದಿರೆ 6
ಮೃಡನ ಮಗನ ಮೊದಲೆ ನೆನೆದುಪಿಡಿಯಿರಮ್ಮ ಕೋಲ ನಿಮ್ಮನುಡಿಯಗೆಲಿಸಲೆಂದು ದ್ರವ್ಯವಕೊಡಿರೆ ದಾನವ 7
ಇಂದಿರಾದೇವಿಗೆ ನಮಿಸಿಬಂದು ರಾಮೇಶಗೆ ಎರಗಿಛಂದಾಗಿ ಕೋಲ ಹೊಯಿದುಪಂಥ ಇಂದು ಗೆಲಿಸೆಂದು 8
*****