ankita ಶ್ರೀರಾಮವಿಠಲ
ರಾಗ: ಕಾಂಬೋಜಿ ತಾಳ: ಝಂಪೆ
ನಿನ್ನ ದರುಶನವಿತ್ತು ಎನ್ನ ಧನ್ಯಮಾಡೊ
ಘನ್ನಮಂತ್ರಾಲಯದ ಗುರು ರಾಘವೇಂದ್ರ ಪ
ಇನ್ನು ಈ ಭವಪಾಶ ಬಂಧಮುಕ್ತನಮಾಡಿ ಪ್ರ-
ಪನ್ನರಕ್ಷಕ ಶ್ರೀರಾಮರ ದರುಶನ ಕೊಡಿಸೊ 1
ಇಹಜನ್ಮ ಸಾಧನದ ಸಹಜಮಾರ್ಗವ ತೋರಿ
ಅಹಿಶಯನ ನರಹರಿಯ ಚರಣಭಜಕನಮಾಡಿ 2
ಚಿರಋಣಿಯು ನಾ ನಿನಗೆ ಪೊರೆಯಬೇಕೈ ಎನ್ನ
ಗುರುವಂತರ್ಯಾಮಿ ಶ್ರೀರಾಮವಿಠಲನಭಜಕ 3
****