Monday, 6 September 2021

ನಿನ್ನ ದರುಶನವಿತ್ತು ಎನ್ನ ಧನ್ಯಮಾಡೊ ankita shreerama vittala

 ankita ಶ್ರೀರಾಮವಿಠಲ

ರಾಗ: ಕಾಂಬೋಜಿ ತಾಳ: ಝಂಪೆ


ನಿನ್ನ ದರುಶನವಿತ್ತು ಎನ್ನ ಧನ್ಯಮಾಡೊ

ಘನ್ನಮಂತ್ರಾಲಯದ ಗುರು ರಾಘವೇಂದ್ರ


ಇನ್ನು ಈ ಭವಪಾಶ ಬಂಧಮುಕ್ತನಮಾಡಿ ಪ್ರ-

ಪನ್ನರಕ್ಷಕ ಶ್ರೀರಾಮರ ದರುಶನ ಕೊಡಿಸೊ 1

ಇಹಜನ್ಮ ಸಾಧನದ ಸಹಜಮಾರ್ಗವ ತೋರಿ

ಅಹಿಶಯನ ನರಹರಿಯ ಚರಣಭಜಕನಮಾಡಿ 2

ಚಿರಋಣಿಯು ನಾ ನಿನಗೆ ಪೊರೆಯಬೇಕೈ ಎನ್ನ

ಗುರುವಂತರ್ಯಾಮಿ ಶ್ರೀರಾಮವಿಠಲನಭಜಕ 3

****


No comments:

Post a Comment