Showing posts with label ರಾಮ ನಾಮವೆಂಬೊ ನಾಮವ purandara vittala. Show all posts
Showing posts with label ರಾಮ ನಾಮವೆಂಬೊ ನಾಮವ purandara vittala. Show all posts

Sunday, 28 March 2021

ರಾಮ ನಾಮವೆಂಬೊ ನಾಮವ purandara vittala

 ರಾಮ ನಾಮವೆಂಬೊ ನಾಮವ

ನೆನೆದರೆ ಭಯವಿಲ್ಲ ಮನಕೇ

ಮೂರು ಲೋಕಕೆ ಕಾರಣಕರ್ತ

ನಾರಯಣ ಜಗಕೆ   ||ರಾಮನಾಮ||

ಶ್ರೀಮನ್ನಾರಯಣ ಜಗಕೆ


ಮತ್ಸ್ಯಾವತಾರವ ತಾಳಿದ  ರಾಮ

ವೇದವ ತರುವುದಕೇ

ಬೆಟ್ಟವ ಬೆನ್ನೊಲು ಪೊತ್ತ ರಾಮ 

ಕೂರ್ಮಾವತಾರಕ್ಕೇ

                          ||ರಾಮನಾಮ||


ಭೂಮಿಯಪೊತ್ತು ನೀರೊಳು 

ಮುಳುಗಿದ ವರಹಾವತಾರಕ್ಕೇ

ಕರುಳನು ಬಗೆದು ಮಾಲೆಯ

ಧರಿಸಿದ ಪ್ರಹ್ಲಾದನ ಸಲಹುದಕೆ

                          ||ರಾಮನಾಮ||


ಭೂಮಿಯ ದಾನವ ಬೇಡಿದ ರಾಮ

ವಾಮನಾವತಾರಕ್ಕೇ

ತಾಯಿಯ ಶಿರವನು ಕಡಿದ ರಾಮ

ಭಾರ್ಗಾವತಾರಕ್ಕೇ

                         ||ರಾಮನಾಮ||


ವನವಾಸವ ತಾ ಮಾಡಿದ ರಾಮ 

ಜನಕನ ವಾಕ್ಯಕ್ಕೇ

ಮಾವ ಕಂಸನ ಕೊಂದ ಕೃಷ್ಣ

ತಾಯಿಯ ಬಿಡಿಸುದಕೇ

                         ||ರಾಮನಾಮ||


ಸತಿಯರ ವೃತವ ಕೆಡಿಸಿದ ರಾಮ

ತ್ರಿಪುರವ ಗೆಲುವುದಕೆ

ವಾಹನ ಬಿಟ್ಟು ತುರಗವನೇರಿದ

ಕಲ್ಕಿಅವತಾರಕ್ಕೇ

                       ||ರಾಮನಾಮ||


ಶ್ಯಾಮಲವರ್ಣವ ತಾಳಿದ ರಾಮ

ಸಮರ್ಥನೂ ಜಗಕೇ

ಸ್ವಾಮಿ  ಶ್ರೀ ಪುರಂದರವಿಠ್ಠಲನು

ರಾಮ ಗೋವಿಂದನೂ ಜಗಕೇ

                      ||ರಾಮನಾಮ||

***