ಕಾಖಂಡಕಿ ಶ್ರೀ ಮಹಿಪತಿರಾಯರು
ಕೌತುಕವು ನೋಡಿ ಮಹಾ ಗುರುನಾಮಮಹಿಮೆಯು ಬಯಲು ವಿದ್ಯವು ಕೇಳಿ ಭಾವಿಕರೆಲ್ಲ ಪ
ಶೂನ್ಯ ಮಂಡಲದಿ ನಿಶ್ಯೂನ್ಯ ಬೀಜದ ವೃಕ್ಷ ಮಾನ್ಯಮೋನದಲಿ ಬೆಳೆಯುತಿಹ ವೃಕ್ಷ ನೋಡಿ 1
ಬಯಲು ಭಾವದ ಪುಷ್ಪ ನಿರ್ಬೈಲ ಸಾಫಲವು ಸುವಾಸನೆಯ ಗೊಂಚಲವು ಜಡಿವೃತ ದಿವ್ಯಾಮೃತ ಫಲವು ಸವಿಯು ಸೇವಿಸುವದಕೆ ಹೊಯಲುವಾದರು ಮಹಾಮಹಿಮರಿದು ನೋಡಿ2
ತಾಯಿ ಇಲ್ಲದ ಶಿಶುವು ಕಾಯವಿಲ್ಲದೆ ಬಂದು ಕೈಯವಿಲ್ಲದೆ ಕೊಂಡು ಸೇವಿಸುವದು ಬಾಯಿ ಇಲ್ಲದ ನುಂಗವದು ಕಂಡು ಮಹಿಪತಿಯು ಕೈಯ ಮುಗಿದನು ಗುರುವಿಗೆ ತ್ರಾಹಿಯೆಂದು 3
***