..
ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ ಪ
ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯಅ
ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ 1
ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ - ಪೊಂಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ2
ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ3
ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ 4
ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ ಭೀಮರಾಯತಪ್ಪದೆ ಕನಕಗೆ ವರಗಳ ಕೊಡುವಂಥ ಭೀಮರಾಯ 5
***