..
ರಚನೆ : ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ : ವೇಂಕಟನಾಥ
ಅಪರೋಕ್ಷ ಜ್ಞಾನನಿಧಿಗಳೂ ಶ್ರೀ ರಾಘವೇಂದ್ರರು ।
ಅಪವರ್ಗ ಕೊಡುವರೂ ಶ್ರೀ ಹರಿಯ ದಯದಿ ।।
ಅಭುಜಭವನ ಪುರದಿಂದ ಬಂದವರು ।
ಅಬುಜೆ ಕರಕಲಮದಲ್ಲುದ್ಭವಿಸಿದ ಶಂಖುಕರ್ಣರು ।।
ದೇವ ಸ್ವಭಾವದವರೂ ಗುರುಸಾರ್ವಭೌಮರು ।
ದೇವ ನೃಸಿಂಹ ಪ್ರಿಯ ಪ್ರಹ್ಲಾದರೇ ಶ್ರೀರಾಯರು ।।
ಸಕಲ ಸುಜನೋದ್ಧಾರಕರಿವರು ।
ಸಕಲ ಭೋಗ ಭಾಗ್ಯವನು -
ಕೊಡುವ ಬಾಹ್ಲೀಕರಾಜರಿವರು ।।
ಭವ್ಯ ಸ್ವರೂಪರಿವರೂ -
ಮಧ್ವ ಮತೋದ್ಧಾರಕರು ।
ಭವಿಷದ್ಬ್ರನಾವೇಶಯುತರೂ -
ಶ್ರೀ ವ್ಯಾಸರಾಜರು ।।
ತುಂಗಾ ತೀರದಿ ವರ -
ಮಂಚಾಲೆಯಲಿ ನಿಂತವರು ।
ಮಂಗಳಾಂಗ ವೇಂಕಟನಾಥ -
ಮೂಲಾರಾಮ ಪದಾರ್ಚಕ ರಾಘವೇಂದ್ರರು ।।
****