Audio by Vidwan Sumukh Moudgalya
ಶ್ರೀ ವ್ಯಾಸತತ್ವಜ್ಞತೀರ್ಥರ ಕೃತಿ
ರಾಗ : ಚಾರುಕೇಶಿ ಖಂಡಛಾಪು
ಮನಸಿಗೆ ಬಂದ ಧನ್ವಂತ್ರಿ ವೈದ್ಯನೇ
ಮನಸಿನ ರೋಗವ ಪರಿಹರಿಸೊ॥ಪ॥
ಧನ ಲೇಶ ಕೇಳಾ ಬಡವರ ಪೊರೆಯೊ ನೀ
ಮನೆಗೆ ಬಂದರೆ ತನು ರೋಗಗಳೋಡೋವು
ನೆನಹ ಮಾರ್ಗಕೆ ಬೇಗ ತಡಿಯದೆ ಈ ಮನ
ಕುನರ ಸೂಲಿವುಳ್ಳ ವಾತವ ಹರಿಸೊ ॥೧॥
ನಾಮವ ನುಡಿವಲ್ಲಿ ಅರುಚಿ ಇದಕಿದೆ
ಭಾಮೆಯ ಕಂಡರೆ ತಲ್ಲಣವಾಹದೊ
ಶ್ರೀ ಮನೋಹರನ ಸ್ಮರಣೆ ಹಾರುತಿದೆ
ಮಹಾದೋಷವುಳ್ಳ ಪಿತ್ತವ ಬಿಡಿಸೊ॥೨॥
ಪಿರಿಯರು ನೋಡಲು ಗುರುಗುರುಯೆನುತಿದೆ
ಪರಿಪರಿ ವಿಷಯದ ನಂಜಿಲಿಂದ
ಪರಿಹರಿಸೊ ಶ್ಲೇಷ್ಮ ಮೊರೆಹೊಕ್ಕೆನು ನಾನು
ಪರಿಹರಿಸೊ ವಾಸುದೇವವಿಠಲರೇಯ ॥೩॥
*****