bybಪ್ರಸನ್ನವೆಂಕಟದಾಸರು
ಯಾತಕೆಲೆ ಮನವೆ ನೀ ಭೀತಿಗೊಳುವೆ ಶ್ರೀನಾಥ ಜಗತಾತ ಹೆತ್ತಾತನಿರೆಅನವರತ ಪ
ಒಡಲೊಳಿರೆ ನವಮಾಸ ಪಡಿಯ ನಡೆಸಿದರಾರುದೃಢಕುಚದಿ ಪಾಲ್ದುಂಬಿ ಕೊಡುವರಾರುನಡೆನುಡಿಗಲಿಸಿ ನಿದ್ರೆವಿಡಿಸಿ ಎಚ್ಚರಿಪರಾರುಕಡೆಮೊದಲಿನೊಡೆಯನಿರಲಡಿಗಡಿಗೆ ಬರಿದೆ 1
ಅಪ್ರಸಿದ್ಧಾತ್ಮನಿಗೆ ವಿಪ್ರಕುಲವಿತ್ತರಾರ್ಶ್ರೀಪ್ರಜÕಮತದಿ ನೆಲೆಸಿಪ್ಪರಾರುಅಪ್ರಬುದ್ಧರಿಗೆ ಮತಿಕ್ಷಿಪ್ರ ಬೋಧಿಪನು ಮುಖ್ಯಪ್ರಾಣವರದ ಸುಪ್ರಧಾನನಿರೆ ನಿರುತ 2
ಧರೆಗೆ ಮಳೆಗರೆದು ಸಸಿಗಳನು ಬೆಳೆಸಿದರಾರುಗಿರಿವಿಪಿನ ಖಗಮೃಗದ ಹೊರುವರಾರುಪರಮಕಾರಣಿಕನಮ್ಮ ಪ್ರಸನ್ವೆಂಕಟನೆ ಜಗದರಸೆಂದುಶ್ರುತಿಸ್ಮøತಿಯೊಳಿಹುದರಿದು ಮರೆದು3
********