..
kruti by shreeshapranesha vittala dasaru
ಶ್ರೀ ಅನಂತಶಯನನ ಸ್ತೋತ್ರ
(ಬೆಳಗಾವಿಯ ಶಹಪೂರ ಪೇಟೆಯ ಅನಂತಶಯನನು ಸ್ತುತಿಸುತ್ತ ಅಲ್ಲಿಯ ಕಟ್ಟಿಯ ಆಚಾರ್ಯರನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದ್ದು)
ನೋಡಿ ನಾನು ಧನ್ಯನಾದೆನು ಅನಂತಶಯನನ |ನೋಡಿ ನಾನು ಧನ್ಯನಾದೆನು ಪ
ನೋಡಿ ನಾನು ಧನ್ಯನಾದೆ |ರೂಢಿಯೊಳಗೆ ಮರುತಮಂದಿರ |ರೂಢಿ ಬೆಳಗಾವಿಯೊಳು ನಿಂದು |ಈಡು ಇಲ್ಲದೆ ಮೆರೆವ ದೇವನ ಅ.ಪ.
ಮೂಲರೂಪನು ವೈಕುಂಠ ಬಿಟ್ಟು |ಪಾಲ ಸಾಗರ ಶಾಯಿ ಶ್ರೀಲೋಲ |ಕಾಲಕಾಲದಿ ಭಕ್ತರ ಮೌಳಿ |ಪೊರಿಯಬೇಕೆಂದು ನಿಂದನ 1
ಸಂತಾನ ಸಂಪತ್ತು ಜ್ಞಾನ ಸುಬುದ್ಧಿಯ |ನಂತ ಶಯನ ಇವರಿಗಾ |ನೆಂತು ಸುಖವ ನೀವೆನೆಂದು |ಸ್ವಾಂತದೊಳಗೆ ಬಂದು ನಿಂದನ 2
ಶ್ರೀಶ ಪ್ರಾಣೇಶ ವಿಠಲರೇಯ |ಶ್ರೀ ಸಹಿತವಾಸ ವಾಗಿಲ್ಲ |ಭೂಸುರೋತ್ತಮ ಕಟ್ಟಿಯವರನ್ನ |ಪೋಷಿಸಬೇಕೆಂದು ನಿಂದನ 3
***