Sunday, 1 August 2021

ನೋಡಿ ನಾನು ಧನ್ಯನಾದೆನು ಅನಂತಶಯನನ ನೋಡಿ ನಾನು ಧನ್ಯನಾದೆನು ankita shreeshapranesha vittala

 ..

kruti by shreeshapranesha vittala dasaru

ಶ್ರೀ ಅನಂತಶಯನನ ಸ್ತೋತ್ರ

(ಬೆಳಗಾವಿಯ ಶಹಪೂರ ಪೇಟೆಯ ಅನಂತಶಯನನು ಸ್ತುತಿಸುತ್ತ ಅಲ್ಲಿಯ ಕಟ್ಟಿಯ ಆಚಾರ್ಯರನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದ್ದು)


ನೋಡಿ ನಾನು ಧನ್ಯನಾದೆನು ಅನಂತಶಯನನ |ನೋಡಿ ನಾನು ಧನ್ಯನಾದೆನು ಪ


ನೋಡಿ ನಾನು ಧನ್ಯನಾದೆ |ರೂಢಿಯೊಳಗೆ ಮರುತಮಂದಿರ |ರೂಢಿ ಬೆಳಗಾವಿಯೊಳು ನಿಂದು |ಈಡು ಇಲ್ಲದೆ ಮೆರೆವ ದೇವನ ಅ.ಪ.


ಮೂಲರೂಪನು ವೈಕುಂಠ ಬಿಟ್ಟು |ಪಾಲ ಸಾಗರ ಶಾಯಿ ಶ್ರೀಲೋಲ |ಕಾಲಕಾಲದಿ ಭಕ್ತರ ಮೌಳಿ |ಪೊರಿಯಬೇಕೆಂದು ನಿಂದನ 1


ಸಂತಾನ ಸಂಪತ್ತು ಜ್ಞಾನ ಸುಬುದ್ಧಿಯ |ನಂತ ಶಯನ ಇವರಿಗಾ |ನೆಂತು ಸುಖವ ನೀವೆನೆಂದು |ಸ್ವಾಂತದೊಳಗೆ ಬಂದು ನಿಂದನ 2


ಶ್ರೀಶ ಪ್ರಾಣೇಶ ವಿಠಲರೇಯ |ಶ್ರೀ ಸಹಿತವಾಸ ವಾಗಿಲ್ಲ |ಭೂಸುರೋತ್ತಮ ಕಟ್ಟಿಯವರನ್ನ |ಪೋಷಿಸಬೇಕೆಂದು ನಿಂದನ 3

***


No comments:

Post a Comment