..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ವಿಭವ ಸಂವತ್ಸರ ಸ್ತೋತ್ರ
ರಾಜ ರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆ ಭ್ರಾಜ ಲಕ್ಷ್ಮಿ ಭೂಮ ನಾರಸಿಂಹನಿಗೂ ಆನಮಿಪೆ ಪ
ರಾಜಿಸುವ ವಿಭವ ನಾಮ ಸಂವತ್ಸರ ನಿಯಾಮಿಕ ಏಕಾತ್ಮನಲ್ಲಿ ನಿಜ ಭಕ್ತಿಯಿಂದ ಸ್ತುತಿಪರನ್ನ ಸಂರಕ್ಷಿಪ ಶ್ರೀಹರಿಯು 1
ಭಾಸ್ಕರೋದಯದಲ್ಲಿ ಪ್ರಭವಾಸಿತ ಪಕ್ಷ ನಂತರ ವಿಭವಸಿತ ಪ್ರತಿಸತ್ ಊಶನ ಶುಕ್ರ ಭಾರ್ಗವ ವಾಸರವು ನಮೋ ಎಂಬೆ ಶುಕ್ರನಿಗೆ ನಮ್ಮ ಹಿತಕಾಯ್ವಿ 2
ದಿನೋದಯದಿ ವಿಭವ ಸಂವತ್ಸರ ಸಿತಪಕ್ಷ ದ್ವಿತಿಯೇಯು ಸೌರವಾಸರವು ರಾಜಶನೈಶ್ಚರಗೂ ಮಂತ್ರಿ ಬುಧ ಮೊದಲಾದವರಿಗೂ ನಮೋ ಎಂಬೆ ದಯವಾಗಲಿ3
ಊದ ಕೊರತೆ ಅತಿ ಉಷ್ಣ ಸಸ್ಯಸಾಂದು ರಾಜರಾಜ ರಾಜ ಜನ ಮನಸ್ತಾಪ ಜನಕಾಷ್ಟ ನೀದಯದಿ ಪರಿಹರಿಸಿ ಸಲಹೋ ಕೃಪಾನಿಧಿಯೇ ನರಹರಿಯೇ 4
ಧವಳ ಗಂಗೆಗೆ ಅಪ್ರಸಿದ್ಧ ಹೆಸರು ಕೂರ್ಮತೀರ್ಥವು ಎಂದುಂಟು ಅದು ಪ್ರಾಮಾಣಿಕ ಎಂದು ತಿಳಿಯುವುದು ವಿಭವದಲಿ ನೀರಿನ ಮಟ್ಟ ಸ್ವಲ್ಪಕಾಲ ತಗ್ಗುವಾಗ 5
ಸಂವತ್ಸರ ನಿಯಾಮಕ ಹರಿ ರೂಪಗಳ ಸೋಚಿತ ಆಚರಣೆ ಸಹ ಸಂಸ್ಮರಿಸಿ ಕುಲ ಇಷ್ಟದೇವರ ಮತ್ತು ಗುರುಗಳ ನೆನೆದು ಭಕ್ತಿ ಮಾಳ್ಪಜನರಿಗೆ ಸುಖಕಾಲ 6
ಕಮಲ ಸಂಭವ ಪಿತ ಕಮಲಾಲಯ ಪತಿ ಅಮಲ ಪೂರ್ಣಾನಂದಾದಿಗುಣ ನಿಧಿಯು ಸುಮನಸರೊಡೆಯ ಶ್ರೀ ಪ್ರಸನ್ನ ಶ್ರೀನಿವಾಸನು ತನ್ನ ಭಕ್ತರಿಗೆ ಈವ ಸುಕ್ಷೇಮವನು ಸರ್ವದಾ 7
***