Showing posts with label ನೆರೆ ಪ್ರಚಂಡ ಬರತಕದ ನಿರಗೊಡದ ಮನ್ಮಥನ devapura lakshmikanta. Show all posts
Showing posts with label ನೆರೆ ಪ್ರಚಂಡ ಬರತಕದ ನಿರಗೊಡದ ಮನ್ಮಥನ devapura lakshmikanta. Show all posts

Monday 2 August 2021

ನೆರೆ ಪ್ರಚಂಡ ಬರತಕದ ನಿರಗೊಡದ ಮನ್ಮಥನ ankita devapura lakshmikanta

ನೆರೆ ಪ್ರಚಂಡ ಬರತಕದ

ನಿರಗೊಡದ ಮನ್ಮಥನ ಪರಿಯನೆಲ್ಲ ಕೇಳು ಕೆಳದಿ

ಸುರಪುರದ ಕರಿವರದ

ಗರುಹಿದಡೆ ಮುತ್ತಿನ ಸರದ ಹಾರವ ನೀವೆ ಕೆಳದೀ ಪ

ಸಸಿ ಬಿಂಬ ದೆಸೆ ತುಂಬಿ

ಪಸರಿಸಿತೆಂಬುದನು ಪಿಕ ಕುಸುಮಾಂಬರಗೆ ಪೇಳೆ ಕೆಳದೀ

ಮಸರೆಳೆಯದಸು ಬಿಳಿ

ಯೆಸಳು ಕೇದಗೆಯಲರ ಹಸಮಾಡಿದನು ನಲಿದು ಕೇಳದಿ 1


ಅಸಿನನೆಯ ಹೊಸಮನೆಯ

ಬಿಸುಗಣೆಯೆಂದಳೆಸೆಯೆಮಣಿಸಲುತರಹರಿಸುವುದುಕೆಳದಿ

ಬಿಸಜಾಕ್ಷನ

ನುಶಿಕ್ಷಣದಿ ತನು ಉಚ್ಚಿಕಡುಸುಡುತಲಿದೆ ನೀ ಸಾಕ್ಷಿ ಕೆಳದೀ 2


ತಂಬೆಲರ ಮುಂಬೆಲರ

ಪಂಬೆಲರನುಳಿದು ಮರಿ-

ದುಂಬಿಗಳ ಸಂಭ್ರಮದಿ ಕೇಳದ ಕೆಳದೀ

ಬೆಂಬಿಡದೆ ಇಂಬುಗೊಂಡಂಬುಜಾಸ್ತ್ರವ ತುಡುಕಿ 3


ಪೊಂಬಲಕೆ ಕೊಳಗಾದೆ ಕೆಳದೀ

ಶಂಭು ಪಣೆ ಯೆಂಬುವಗೆ

ಕುಂಬಿನಿಯೊಳೇ ಮಣಿಹ-

ದೆಂಬುದನು ಕೊಡಬಹುದೆ ಕೆಳದೀ 4


ನಂಬಿದಳು ಕಂಬನಿಯ ತುಂಬಿರಲು ಸಖಿಯರೊಳು

ಗಾಂಭೀರ್ಯತನವಹುದೇ ಕೆಳದಿ

ಕಂತುಶರವಂತಿರದೆಂತೊರೆಯಬಹುದೆನಗೆ

ಚಿಂತೆ ತಲ್ಲಣ ಕೆಳದೀ 5


ದಂತಿ ನಡೆಯಂತೆ ಬೆಡಗಿಂತವಳ ಕಾಣೆ ಗುಣ

ವಂತೆ ವಿಧಾನ್ಯಾಯದಲಿ

ಸಂತೈಸಿ ಯೆನ್ನ ನೆರೆವಂತೆ ಸುರಪುರದ ಲಕ್ಷ್ಮೀ

ಕಾಂತನಿಗೆ ಬಿನ್ನಯಿಸು ಕೆಳದೀ 6

****