ದೂರ ನೋಡದಿರೆಲೊ ರಂಗಯ್ಯಾ ಪ.
ದೂರ ನೋಡದಿರು ಭವ ಮಡುವಿನೊಳಗಿರುವೆನೋ
ಪಿಡಿಯೆನ್ನ ಕೈಯ ತಡಮಾಡ ಬ್ಯಾಡಯ್ಯ ಅ.ಪ.
ಹಿಂದೇಸು ಜನ್ಮಂಗಳು ಬಂದು ಪೋದಾವಯ್ಯ
ಮುಂದಿನಾಗತಿಯು ತೋರದಯ್ಯಾ
ತಂದೆ ತಾಯಿ ಸರ್ವ ಬಂಧು ಬಾಂದವಾ
ನೀನೆ ಸಿಂಧುಶಯನನೆ ಕಂದರ್ಪ ಪಿತನೆ1
ಆರು ಕಾಯುವರಿಲ್ಲಾ ಮುರಾರಿ ನಿನಗೆ ಸಾರಿದೆನಲ್ಲಾ
ಸೇರಿಸೋ ಸಾಧು ಜನರ ಸಹವಾಸಾ
ಹರಿ ನಿನ್ನಲ್ಲಿ ಮನಸು ನಿಲ್ಲಿಸು
ಶ್ರೀಶಾ ಶ್ರೀನಿವಾಸಾ 2
ಯೆಷ್ಟು ಹೇಳಲಿ ಯನ್ನ ಕಷ್ಟ ಕೇಳುವರಿಲ್ಲ
ಅರಿಷ್ಟ ಸಂಸಾರದೊಳೂ
ಕೆಟ್ಟು ಪೋಗುವೆನು ದೃಷ್ಟಿಯಿಂದಲಿ
ನೋಡೆನ್ನ ಕಾಳಿಮರ್ಧನಕೃಷ್ಣವಾ 3
****