ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ
ಯಾರೆ ಹುಡುಗಿ ನೀನು ಬಂದವಳಿಲ್ಲಿ ಯಾರೆ ಹುಡುಗಿ ನೀನು
ಯಾರೆ ಹುಡುಗಿ ನೀನು ಮೂರು ಸಂಜೇಲಿ ಬಂದು
ನೀರಜಾಂಬಕೆ ಕರವೀರ ಸದನಳೆ..
ಏನು ಕಾರಣ ಬಂದಿ ಕೈಯೊಳು ವೇಣು ಪಿಡಿದು ನಿಂದಿ
ಧೇನು ಕಾನನದೊಳು ವೇಣುನೂದಲು ಕೃಷ್ಣ
ಆನನ ತೋರಿಸೆ ಮಾನಿನಿ ಮಣಿಯಳೆ
ಏನು ಪೇಳಿದರಮ್ಮಾ ವಾಯ್ವಾರ್ಚಿತ ತಾನೇ ಬರುವನಮ್ಮಾ
ಏನು ಸೂಚಿಸಲೆಂದು ನೀನೇ ಹೇಳಿದರೀಗ
ನಾನು ಶೋಧಿಸುವೆ ಮಾನಿನಿಮಣಿಯಳೆ...
ಇಂದುಮುಖಿಯೆ ನೀನು ಸುಮ್ಮನೆ
ನಿಂದ ಕಾರಣವೇನು
ಇಂದಿರೇಶನ ಸಖಿ ಒಂದು ಮಾತಾಡೇ ನಿನ
ಗೊಂದಿಸುವೆ ಶಿರದಿಂದ ಸುವಸನಳೆ...
*****
ಯಾರೆ ಹುಡುಗಿ ನೀನು ಬಂದವಳಿಲ್ಲಿಯಾರೆ ಹುಡುಗಿ ನೀನು ಪ
ಯಾರೆ ಹುಡುಗಿ ನೀನು ಮೂರು ಬಾರಿಲಿ ಬಂದಿನೀರಜಾಂಬಕ ಕರವೀರದವಳೆ ನೀ 1
ಏನು ಕಾರಣ ಬಂದಿ ಕೈಯೊಳುವೇಣು ಪಿಡಿದು ನಿಂದಿಕಾನನದೊಳು ವೇಣುವನೂದಲುಆನನ ತೋರಿಸು ಮಾನಿನಿ ಮಣಿಯೆ 2
ಏನು ಪೇಳಿದನಮ್ಮಾ ಅಚ್ಯುತಪ್ರಾಣದೇವನು ನಿಮ್ಮಾಏನು ಸೂಚಿಸಲೆಂದು ನೀನು ಪೇಳಿದರೀಗನಾನು ಶೋಧಿಸುವೆನೆ ದೀನರುದ್ಧಾರಳೇ 3
ಇಂದುಮುಖಿಯೆ ನೀನು ಸುಮ್ಮನೆನಿಂದ ಕಾರಣವೇನುಇಂದಿರೇಶನ ಸಖಿ ಒಂದು ಮಾತಾಡದೆ ನಿನ-ಗೊಂದಿಸುವ ಕರದಿಂದ ಮಹಾಸಕ 4
****