Showing posts with label ಗುರುವರ್ಯ ಪುರಂದರ ಗುರುವರ್ಯ karpara narahari. Show all posts
Showing posts with label ಗುರುವರ್ಯ ಪುರಂದರ ಗುರುವರ್ಯ karpara narahari. Show all posts

Monday 2 August 2021

ಗುರುವರ್ಯ ಪುರಂದರ ಗುರುವರ್ಯ ankita karpara narahari

ಗುರುವರ್ಯ ಪುರಂದರ ಗುರುವರ್ಯ ಪ


ಗುರುವರ್ಯ ಕಾಯಬೇಕೆನ್ನ ಮಧ್ವ

ಗುರುಕೃತ ಗ್ರಂಥಾರ್ಥe್ಞÁನ ಕೊಟ್ಟು

ಕರಣತ್ರಯ ಗಳಿಂದಾಚರಿಸುವ ಕರ್ಮವ

ಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ ಅ.ಪ


ಸುರಮುನಿ ನಿನ್ನ ಪ್ರಾರ್ಥನದಿ ಶ್ರೀ ಮ

ದ್ಗುರು ವೇದವ್ಯಾಸರು ದಯದಿ ಪಾ-

ಮರ ಪಂಡಿತರಿಗೆ ಸುಲಭದಿ ಧರ್ಮ ತಿಳಿದಾ-

ಚರಿ ಪರೆಂದು ಮುದದಿ ಅರಿತು

ನಿರುತ ಶೇವಿಪರಿಗೆ ಪರಮ ಮಂಗಳವೀವ

ವರ ಭಾಗವತ ಗ್ರಂಥ ನಿರ್ಮಿಸಿದರು ಸತ್ಯ 1


ಕಲಿಯುಗದಲಿ ಹರಿನಾಮ ಜನರ

ಕಲಿ ಕಲ್ಮಷಾದ್ರಿ ಸೂತ್ರಾಮ ಎಂದು

ತಿಳಿದು ಕೀರ್ತಿಪರಿಗೆ ಪರಮ ಮಂ

ಗಳ ಕರನಾಮದ ಮಹಿಮ ಎನುತ

ಇಳಿಯೊಳು ವರ ಪುರಂದರ ಗಡ

ದಲಿ ಪುಟ್ಟಿ ಬಲು ವಿಧ ಹರಿನಾಮಂ-

ಗಳನು ವಿರಚಿಸಿದ 2


ಕಾಶ್ಯಾದಿ ಕ್ಷೇತ್ರ ಸಂಚರಿಸಿ ಪದ

ರಾಶಿ ಸುಳಾದಿಗಳ ರಚಿಸಿ ಸಂ-

ತೋಷ ತೀರ್ಥರ ಮತ ಬಲಿಸಿ ಗುರು

ವ್ಯಾಸರಿಂದುಪದೇಶ ಗ್ರಹಿಸಿ ಜಗದಿ

ಭೂಸುರ ಪಾಲಕ ಶ್ರೀಶಕಾರ್ಪರನರ

ಕೇ ಸರಿ ಗತಿ ಪ್ರಿಯ ದಾಸರೆಂದೆನಿಸಿದ 3

****