Showing posts with label ದಾವಗಿಲ್ಲ ಖೂನ ತನ್ನೊಳಗ ಅವಗೆಲ್ಲಿಯ ಜ್ಞಾನ ಜಗದೊಳಗ mahipati. Show all posts
Showing posts with label ದಾವಗಿಲ್ಲ ಖೂನ ತನ್ನೊಳಗ ಅವಗೆಲ್ಲಿಯ ಜ್ಞಾನ ಜಗದೊಳಗ mahipati. Show all posts

Wednesday, 1 September 2021

ದಾವಗಿಲ್ಲ ಖೂನ ತನ್ನೊಳಗ ಅವಗೆಲ್ಲಿಯ ಜ್ಞಾನ ಜಗದೊಳಗ ankita mahipati

ದಾವಗಿಲ್ಲ ಖೂನ ತನ್ನೊಳಗ ಅವಗೆಲ್ಲಿಯ ಜ್ಞಾನ ಜಗದೊಳಗ pa 

ತಿಳಿದುಕೊಳ್ಳದವ ಆತ್ಮವಿಚಾರ ಕಳೆದು ಕೊಂಡವನೆ ಹಿತ ಅಪಾರ ಹೊಳಿಯದವಗ ಎಂದು ವಸ್ತುದಾಧಾರ 1 

ದಾವಗಿಲ್ಲ ಖೂನ ಗುರುಮುಖ ಅವನೆ ತಾಳಿ ಬಾಹ್ವ ಜನ್ಮ ಅನೇಕ ಭಾವಿಸದು ದಾವಗಿನ್ನ ವಿವೇಕ ಅವಗೆಲ್ಲಿಹದು ನೋಡಿ ಸ್ವಸುಖ 2 

ಖೂನ ತನ್ನ ತಿಳಿವದು ತ್ವರಿತ ಅನುಭವಕಿದೆ ತಾಮ ಸನ್ಮತ ದೀನ ಮಹಿಪತಿಗೆ ಸ್ವಹಿತ ಭಾನು ಕೋಟೆ ತೇಜನಾದ ಉದಿತ 3

****