..
ಎಲೆ ಮಾನಿನಿ ಬಲು ನುಡಿಯೋದುಚಿತವೆಭಲಾ ಭಲಾ ಎನಿಸು ಅನುಗಾಲ ಪ.
ಬಂದ ಜನರು ಬಲು ಚಂದಾಗಿ ಕುಳಿತಿಹರು ಚಂದಿರವದನೆ ಸುಭದ್ರಾಚಂದಿರವದನೆ ಸುಭದ್ರಾ ನಿನ್ನ ಮುಖಕುಂದಿತಾಕೆಂದು ಕಮಲಾಕ್ಷ 1
ಬಲ್ಲೆ ಭಾಷೆ ನಿನ್ನ ಕ್ಷುಲ್ಲತನದ ಬುದ್ಧಿಮಲ್ಲಿಗೆಯಂಥ ಸುಕುಮಾರಿಮಲ್ಲಿಗೆಯಂಥ ಸುಕುಮಾರಿ ಗರತಿಗೆ ಹೊಲ್ಲ ಮಾತುಗಳ ನುಡಿಯೋರೆ2
ಮಾನುಳ್ಳ ಮಗಳಿಗೆ ನಾನಾ ಮಾತುಗಳಂದಿ ಏನೆಂಬೋರಿದಕೆ ಜನರೆಲ್ಲಏನೆಂಬೋರಿದಕೆ ಜನರೆಲ್ಲ ಸತ್ಯಭಾವೆಮಾನಾಪಮಾನ ನಿನಗಿಲ್ಲ3
ಮದ್ಗುಣಕಿ ಹೂವು ಉದ್ದಾದರೇನ ಮುದ್ದು ಮಲ್ಲಿಗೆಯ ಸರಿಯೇನ ಮುದ್ದು ಮಲ್ಲಿಗೆಯ ಸರಿಯೇನ ಭಾವೆ ಸುಭದ್ರಾಗೆ ನೀನು ಸರಿಯೇನ 4
ತಂಗಿಗಾಡಿದ ಮಾತು ರಂಗರಾಮೇಶ ಕೇಳಿಬಂಗಾರದಂಥ ಗುಣನಿಧಿಬಂಗಾರದಂಥ ಗುಣನಿಧಿ ಸುಭದ್ರೆಗೆವ್ಯಂಗ್ಯ ಮಾತುಗಳ ನುಡಿವೋರೆ5
****