Showing posts with label ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ vijaya vittala. Show all posts
Showing posts with label ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ vijaya vittala. Show all posts

Thursday, 17 October 2019

ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ ankita vijaya vittala

ದುರಿತ ಗಜಕೇಸರಿಯೆ ತ್ರಿಲೋಕದ
ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ |
ಕರುಣವ ಮಾಡಿ ಪರಿಯಲಿ ಸಾರಂಗ |
ಧರನೆ ಧರಣಿಧರ ವರ ಪರಿಯಂತಾ ಪ

ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು |
ಹೇಮ ಮುನೀಶ್ವರ ಕಾಮಿಸಿ ಹರಿಪಾದ |
ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ ||
ಸಾಮಜವರದನ ನಾಮವ ನೆನೆಯಲು |
ಹೇಮ ತೀರಥದೊಳು |
ತಾ ಮನಗೊಂಬ ನಾಮನೆ ಪಡೆದು 1

ಮಂಗಳಾಂಗಿಯೇ ಬರಲು ರಂಗರಾಯನು ಸಾ |
ರಂಗಶರವೇಪಿಡಿದುಶೃಂಗಾರಮಯದಿಂದ | ಬಂಗಾರ ರಥ ತು |
ರಂಗಗಳ ಸಮೇತ ಭುಜಂಗಶಯನನಾಗಿ ಕಂಗೊಳಿಸುತ್ತಲೂ |
ತುಂಗ ಮಹಿಮ ವಿಹಂಗಾದಿಗಳಿಂದ
ಕೈಕೊಳ್ಳುತ್ತಿಂಗಿತದಲಿ ನೀಲಾಂಗ ನಿರ್ದೋಷಾ 2

ಜಯ ಕುಂಭಘೋಣನಿಲಯಾನೆನೆಸುವ ಉ |
ಭಯ ಕಾವೇರಿ ನಿವಾಸಾ | ಭಯ ಕೃದ್ಭಯನಾಶ |
ತ್ರಯ ಗುಣವಿರಹಿತಾ ವಿಯದ್ಗಂಗಾನದಿ ತಾತಾ |
ಜಯ ಜಯವೆನುತಿರೆ ಪ್ರಿಯನಾಗಿ ಕೇಳುತಾ |
ನಯನ ಮೀತಾರ ಪಾಲಯಪಾವನದೇವಾ |
ದಯಮುಖ ಹರಾ ವಿಜಯವಿಠ್ಠಲಪರಾ 3
**********