Showing posts with label ಇಲ್ಲೇ ವೈಕುಂಠ ಕಾಣಿರೊ ಸಿರಿವಲ್ಲಭನಂಘ್ರಿಯ ನೆರೆನಂಬಿ purandara vittala ILLE VAIKUNTA KAANIRO SIRIVALLABHANANGHRIYA NERENAMBI. Show all posts
Showing posts with label ಇಲ್ಲೇ ವೈಕುಂಠ ಕಾಣಿರೊ ಸಿರಿವಲ್ಲಭನಂಘ್ರಿಯ ನೆರೆನಂಬಿ purandara vittala ILLE VAIKUNTA KAANIRO SIRIVALLABHANANGHRIYA NERENAMBI. Show all posts

Sunday, 7 November 2021

ಇಲ್ಲೇ ವೈಕುಂಠ ಕಾಣಿರೊ ಸಿರಿವಲ್ಲಭನಂಘ್ರಿಯ ನೆರೆನಂಬಿ purandara vittala ILLE VAIKUNTA KAANIRO SIRIVALLABHANANGHRIYA NERENAMBI

ಇಲ್ಲೇ ವೈಕುಂಠ ಕಾಣಿರೊ -ಸಿರಿ |
ವಲ್ಲಭನಂಘ್ರಿಯ ನೆರೆನಂಬಿದವರಿಗೆ ಪ.

ನುಡಿಯೆರಡಾಗದೆ ಕಡುಕೋಪ ಮಾಡದೆ |
ಬಡತನ ಬಂದರು ಲೆಕ್ಕಿಸದೆ ||
ಬೆಡಗು ಹೆಣ್ಣುಗಳ ಕಡೆಗಣ್ಣೊಳು ನೋಡದೆ |
ಧೃಡಚಿತ್ತದಲಿ ಶ್ರೀ ಹರಿಯ ನಂಬಿದವರಿಗೆ 1

ಪಕ್ಷಪಾತವಿಲ್ಲದನ್ನದಾನಂಗಳನು - |
ಪೇಕ್ಷೆಯ ಮಾಡದೆ ಗುರುಹಿರಿಯರನು |
ಮೋಕ್ಷವ ಬಯಸುತ ಅನ್ಯಾಯವಳಿಯುತ |
ಲಕ್ಷ್ಮೀನಾರಾಯಣನ ಬಿಡದೆ ಧೇನಿಪರಿಗೆ 2

ಪರಹಿತವನು ಮಾಡಿ ಕೆರೆಬಾವಿಗಳ |
ಅರವಟಿಗೆಯ ಸಾಲಮರವ ಹಾಕಿ ||
ಸಿರಿಪುರದರಸು ಶ್ರೀ ಪುರಂದರವಿಠಲನ |
ಸ್ಥಿರಚಿತ್ತದಲಿ ಬಿಡದೆ ಸ್ಮರಿಸುತಲಿ ಹರಿಗೆ 3
****