Showing posts with label ಬಾರೋ ಮನ್ಮನಕೆ ಭಾವಿ ಭಾರತಿವರನೆ tandevaradagopala vittala. Show all posts
Showing posts with label ಬಾರೋ ಮನ್ಮನಕೆ ಭಾವಿ ಭಾರತಿವರನೆ tandevaradagopala vittala. Show all posts

Thursday, 5 August 2021

ಬಾರೋ ಮನ್ಮನಕೆ ಭಾವಿ ಭಾರತಿವರನೆ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)


ಬಾರೋ ಮನ್ಮನಕೆ ಭಾವಿ ಭಾರತಿವರನೆ ಪ


ಬಾರೋ ಬಾರೋ ಪರಭಾರೆ ನಿಭವ ಭೀಮನ ಮನದಿಂದ ಅ.ಪ.


ಭೂತೇಶಾದೀನುತ ಭಾವಿ ಭೀಮಾ ಭಯಕುಲ ಸುರಸೋಮಾ ಭೂಭಾರಾಧರ ಶೇಷನ ಪ್ರೇಮಾ ಸುರಕುಲ ಸುರಕಾಮಾ ಭೀಮ ಭವ್ಯವೀ ನಾಮ ಪೂಜಿತ ಭಾಮಿನಿಗೆಶುಭಕಾಮಿತಾರ್ಥಗಳಿತ್ತು ಸಲಹಿದೆಯಾಮಯಾಮಕೆ ಸ್ಮರಿಸುವೆನೊ ಸುರಕಾಮಧೇನು ಸಕಲ ತರುವೇ 1

ತಡಮಾಡುವುದ್ಯಾತಕೊ ಹಂಸಾ ಬಡಿ ಅಸುರರ ಧ್ವಂಸಾಗಡಿನಾನಲ್ಲವೇ ನಿನ್ನ ಖಾಸಾ ಗರುಡಾದ್ಯರ ತೋಷಾ ಪೊಡವಿಯೊಳಗೆ ನಿನ್ನ ಪುಡುಕಿದ ನರನಿಗೆ ಬಿಡಿ ಮಾಡುವರೇ ದಡಸೇರಿಸು ಕಡುಕರುಣಿಯೆ ಬೇಗ 2

ನಾನಾಲಂಕಾರದ ಚಮರಂಗಾ ಅದರೊಳಗೆ ಶುದ್ಧಾಂಗಾ ಬಂದು ಕುಣಿಯುವ ಪಾಂಡುರಂಗಾ ಪಾದ್ಗಾಶ್ರಿತ ಭೃಂಗಾ ಲಿಂಗದಿಂದ ಎನ್ನ ಅಂಗಸಹಿತವಾಗಿ ಅಂಗದೊಳಗೆ ಇಟ್ಟು ರಂಗನ ಪೂಜಿಪಮಂಗಳಾಂಗ ಶುಭತುಂಗ ಮಹಿಮ ತಂದೆವರದಗೋಪಾಲವಿಠ್ಠಲ ಪ್ರಿಯ ಬೇಗ 3

***