Showing posts with label ರಾಮ ರಾಮೆನ್ನಿರೋ ಮುಖ್ಯ ತಾ ಕಾರಣಾ mahipati RAAMA RAAMANENNIRO MUKHYA TA KAARANA. Show all posts
Showing posts with label ರಾಮ ರಾಮೆನ್ನಿರೋ ಮುಖ್ಯ ತಾ ಕಾರಣಾ mahipati RAAMA RAAMANENNIRO MUKHYA TA KAARANA. Show all posts

Wednesday, 11 December 2019

ರಾಮ ರಾಮೆನ್ನಿರೋ ಮುಖ್ಯ ತಾ ಕಾರಣಾ ankita mahipati RAAMA RAAMANENNIRO MUKHYA TA KAARANA



ರಾಮ ರಾಮೆನ್ನಿರೋ ಮುಖ್ಯ ತಾ ಕಾರಣ

ನೇಮದಿಂದಾಯಿತು ಅಹಲ್ಯೋದ್ಧರಣ

ರೋಮರೋಮಕೆ ತಾ ಪ್ರೇಮ ಬಾಹಗುಣ

ನಾಮಸ್ಮರಿಸಿ ದಶರಥಾತ್ಮಜನ ll 1 ll


ಒಮ್ಮೆ ಸ್ಮರಿಸಿರೊ ರಾಮರಾಮೆಂದು ತಾ

ಸುಮ್ಮನೆ ಬಾಹುದು ಸಾರದ ಅಮೃತ

ತಮ್ಮನ ಜೀವ ಪಡೆದ ಸಂಜೀವ ತಾ

ಝಮ್ಮನೆ ಹಾದಿಮಾಡಿತು ಸಮುದ್ರ ತಾ ll 2 ll


ರಾಮರಾಮೆನ್ನಲು ಸಾಮರಾಜ್ಯಹುದು

ನೇಮದಿಂದೆನ್ನಿರೊ ಶ್ರಮ ನೀಗೋಗುದು

ನಾಮ ಕೊಂಡಾಡಲು ರಾಮನಂತಾಹುದು

ಸುಮ್ಮನೆಯಾದರೆ ತಾಮಸ ಬಾಹುದು ll 3 ll


ರಾಮರಾಮೆಂದರೆ ಬ್ರಹ್ಮರಾಕ್ಷಸ ತಾ

ಸುಮ್ಮನೆ ಓಡಿಹೋಗೋದು ತತ್ಕಾಲತಾ

ನಾಮ ಸೇವಿಸಲು ಸುಮ್ಮಲ್ಹೊಳೆದು ತಾ

ಝಮ್ಮನೆ ಬಾಹುದು ಭಾಗ್ಯ ಕೈಕೊಟ್ಟು ತಾ ll 4 ll


ರಾಮನಾಮವೆ ತಾ ಪಾಪಕೆ ತಾ

ನಾಮ ತೇಲಿಸಿತು ನೀರೊಳು ಪರ್ವತ

ನೇಮದಿಂದಾದರ ಭಕ್ತರರಹುತಾ

ಸೀಮಿ ಕೈಕೊಟ್ಟಿತು ಭಕ್ತಗೆ ಶಾಶ್ವತ ll 5 ll


ನಾಮವೆ ಕಪಿಕುಲವ ತಾರಿಸಿತು

ಸೋಮಶೇಖರಗೆ ತಾನೆ ಪ್ರಿಯವಾಯಿತು

ಗ್ರಾಮನಂದಿಯಲಿ ನೇಮಪೂರಿಸಿತು

ರೋಮರೋಮಲ್ಲ ಭರತಗೆ ಸುಖವಾಯಿತು ll 6 ll


ಸ್ವಾಮಿ ಶ್ರೀರಾಮನಾಮ ಸುಅಮೃತ

ಕಾಮಪೂರಿಸುವ ಕಾಮಧೇನುವೆ ತಾ

ನೇಮದಿಂದಾಗುವ ಮಹಿಪತಿಗಿಂತ

ರಾಮರಾಜ್ಯವೆ ಎನ್ನೊಳಗಾಗೆದ ತಾ ll 7 ll

***


ನಂದ ರಾಗ , ಝಂಪೆತಾಳ (raga, tala may differ in audio)

ರಾಮ ರಾಮೆನ್ನಿರೋ ಮುಖ್ಯ ತಾ ಕಾರಣಾ
ನೇಮದಿಂದಾಯಿತು ಅಹಲ್ಯೋದ್ಧಾರಣಾ
ರೋಮ ರೋಮಕ ತಾ ಮ್ರೇಮ ಬಾಹಗುಣ
ನಾಮಸ್ಮರಿಸಿ ದಶರಥಾತ್ಮಜನಾ ||ಪ||

ಒಮ್ಮೆ ಸ್ಮರಿಸಿರೋ ರಾಮರಾಮೆಂದು ತಾ
ಸುಮ್ಮನೇ ಬಾಹುದು ಸಾರಸ ಅಮೃತಾ
ತಮ್ಮನಾ ಜೀವನಾ ಪಡೆದ ಸಂಜೀವ ತಾ
ಝಮ್ಮನೇ ಹಾದಿ ಮಾಡಿತು ಸಮುದ್ರ ತಾ ||೧||

ರಾಮರಾಮೆನ್ನಲು ಸಾಮರಾಜ್ಯಾಹುದು
ನೇಮದಿಂದೆನ್ನಿರೋ ಶ್ರಮ ನೀಗಿ ಹೋಹುದು
ನಾಮ ಕೊಂಡಾಡಲು ರಾಮನ ತಾಹುದು
ಸುಮ್ಮನೆಯಾದರೆ ತಾ ಮನೆ ಬಾಹುದು ||೨||

ರಾಮ ರಾಮೆಂದರೆ ತಾ ಬ್ರಹ್ಮರಾಕ್ಷಸ ತಾ
ಸುಮ್ಮನೆ ಓಡಿ ಹೋಗುದು ತಾತ್ಕಾಲ ತಾ
ನಾಮ ಸೇವಿಸಲು ಘಮ್ಮನ್ಹೊಳೆದು ತಾ
ಝಮ್ಮನೇ ಬಾಹುದು ಭಾಗ್ಯ ಕೈಗೊಟ್ಟು ತಾ ||೩||

ರಾಮನಾಮವೆ ತಾ ಪಾಪಕೆ ಎರವುತಾ
ನಾಮ ತೇಲಿಸಿತು ನೀರೊಳು ಎರವುತಾ
ನೇಮದಿಂದಾರ ಭಕ್ತರರಹುತಾ
ಸೀಮೆ ಕೈಗೊಟ್ಟಿತು ಭಕ್ತಗ ಶಾಶ್ವತಾ ||೪||

ನಾಮವೆ ಕಪಿಕುಲವ ತಾರಿಸಿತು
ಸೋಮಶೇಖರಗೆ ತಾ ಪ್ರಿಯವಾಯಿತು
ಗ್ರಾಮನಂದಿಯಲಿ ನೇಮ ಪೂರಿಸಿತು
ರೋಮ ರೋಮೆಲ್ಲಾ ಭರತಗೆ ಸುಖವಾಯಿತು ||೫||

ಸ್ವಾಮಿ ಶ್ರೀರಾಮನಾಮ ಸು ಅಮೃತಾ
ಕಾಮ ಪೂರಿಸುವ ಕಾಮಧೇನುವೇ ತಾ
ನೇಮದಿಂದಾಗುವಾ ಮಹಿಪತಿಗ್ಹಿತಾ
ರಾಮರಾಜ್ಯವೆ ಎನ್ನೊಳಗಾಗೇದ ತಾ ||೬||
****

ರಾಮರಾಮೆನ್ನಿರೋ ಮುಖ್ಯ ತಾ ಕಾರಣ ನೇಮದಿಂದಾಯಿತು ಅಹಲ್ಯೋದ್ದರಣ ರೋಮರೋಮಕೆ ತಾ ಪ್ರೇಮ ಬಾಹಗುಣ ನಾಮಸ್ಮರಿಸಿ ದಶರಥಾತ್ಮಜನ 1 

ಒಮ್ಮೆ ಸ್ಮರಿಸಿರೊ ರಾಮರಾಮೆಂದು ತಾ ಸುಮ್ಮನೆ ಬಾಹುದು ಸಾರದ ಅಮೃತ ಸಂಜೀವ ತಾ ಝಮ್ಮನೆ ಹಾದಿಮಾಡಿತು ಸಮುದ್ರ ತಾ 2 

ರಾಮರಾಮೆನ್ನಲು ಸಾಮರಾಜ್ಯಹುದು ನೇಮದಿಂದೆನ್ನಿರೊ ಶ್ರಮ ನೀಗೋಗುದು ನಾಮ ಕೊಂಡಾಡಲು ರಾಮನಂತಾಹುದು ಸುಮ್ಮನೆಯಾದರೆ ತಾಮಸ ಬಾಹುದು 3 

ರಾಮರಾಮೆಂದರೆ ಬ್ರಹ್ಮರಾಕ್ಷಸ ತಾ ಸುಮ್ಮನೆ ಒಡಿಹೋಗುದು ತಾತ್ಕಾಲತಾ ನಾಮ ಸೇವಿಸಲು ಸುಮ್ಮಲ್ಹೊಳೆದು ತಾ ಝಮ್ಮನೆ ಬಾಹುದು ಭಾಗ್ಯ ಕೈಕೊಟ್ಟು ತಾ 4 

ರಾಮನಾಮವೆ ತಾ ಪಾಪಕೆ ತಾ ನಾಮ ತೇಲಿಸಿತು ನೀರೊಳು ಪರ್ವತ ನೇಮದಿಂದಾದರ ಭಕ್ತರರಹುತಾ ಸೀಮಿ ಕೈಕೊಟ್ಟಿತು ಭಕ್ತಗೆ ಶಾಶ್ವತ 5 

ನಾಮವೆ ಕಪಿಕುಲವ ತಾರಿಸಿತು ಸೋಮಶೇಖರಗೆ ತಾನೆ ಪ್ರಿಯಾಯಿತು ಗ್ರಾಮನಂದಿಯಲಿ ನೇಮಪೂರಿಸಿತು ರೋಮರೋಮೆಲ್ಲ ಭರತಗ ಸುಖವಾಯಿತು 6 

ಸ್ವಾಮಿ ಶ್ರೀರಾಮನಾಮ ಸುಅಮೃತ ಕಾಮಪೂರಿಸುವ ಕಾಮಧೇನುವೆ ತಾ ನೇಮದಿಂದಾಗುವ ಮಹಿಪತಿಗಿಂತ ರಾಮರಾಜ್ಯವೆ ಎನ್ನೊಳಗಾಗೆದ ತಾ 7

****