Showing posts with label ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕೂಸಿನ್ನ indiresha. Show all posts
Showing posts with label ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕೂಸಿನ್ನ indiresha. Show all posts

Friday 27 December 2019

ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕೂಸಿನ್ನ ankita indiresha

ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕೂಸಿನ್ನಚಂಡನಾಡುತಾಲೆ ಬಾಲೆರ್ಹಿಂಡು ಕೂಡಿ ಬಂದನಂತೆ ಪ

ದಂಡದಿಂದ ಚಿನ್ನಿ ಬಾಲೇರ್ಹಿಂದಿನೋಳು ಚಿಮ್ಮಿದನಂತೆಕಂಡಕಂಡ ನಾರಿಯರೆಲ್ಲ ಪುಂಡ ಕೃಷ್ಣರೆಂಬರಂತೆ ೧

ದುಂಡು ಮುಖದೊಳಿಟ್ಟು ವೇಣುದಂಡವನೂದಲು ಕೃಷ್ಣಹಿಂಡು ನವಿಲು ಪಕ್ಷಿಗಳು ಮಂಡಲ ಕಟ್ಟಿದವಂತೆ ೨

ದೃಷ್ಟಿಯಾದೀತೆಂದು ಕೂಸಿಗೆ ಎಷ್ಟು ಹೇಳಿದೆ ಮನೆಬಿಟ್ಟು ಪೋಗಬ್ಯಾಡೆಂದರೆ ಕೃಷ್ಣ ಘಳಿಗೆ ನಿಲ್ಲವಲ್ಲ ೩

ಇಂದಿರೇಶ ಎನ್ನ ಮನೆ ಮುಂದಲಾಡೆಂದ್ಹೇಳಿದರೆನಂದ ವೃಜದಿ ಪೊಕ್ಕು ಬಹಳ ದುಂದು ಮಾಡುವನು ಕೃಷ್ಣ ೪
********