Showing posts with label ಶರಣು ಶ್ರೀದೇವದೇವಾದಿ ಸದ್ಗುರುನಾಥ ಶರಣು ಸುರಮುನಿಜನರ mahipati. Show all posts
Showing posts with label ಶರಣು ಶ್ರೀದೇವದೇವಾದಿ ಸದ್ಗುರುನಾಥ ಶರಣು ಸುರಮುನಿಜನರ mahipati. Show all posts

Wednesday, 1 September 2021

ಶರಣು ಶ್ರೀದೇವದೇವಾದಿ ಸದ್ಗುರುನಾಥ ಶರಣು ಸುರಮುನಿಜನರ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಶರಣು ಶ್ರೀದೇವದೇವಾದಿ ಸದ್ಗುರುನಾಥ ಶರಣು ಸುರಮುನಿಜನರ ಪ್ರಾಣ ಜೀವನದಾತ ಶರಣು ಪರಬ್ರಹ್ಮ ಪರಮಾನಂದ ಭರಿತ ಸಿರಿ ಅರಸ ಕರುಣಾಳು ಶ್ರೀನಾಥ ಶರಣು 1 

ವೇದ ಆಗೋಚರಾನಾದಿ ಗುರು ಅನಂತ ಸಾಧುಜನ ಸಹಕಾರ ಸಂತತ ಸದೋದಿತ ಸದ್ಬ್ರಹ್ಮ ಆನಂದ ಗುಣತ್ರಯ ವಿರಹಿತ ಆದಿ ಅನಾದಿ ಅವಿನಾಶ ಗುರುನಾಥ 2 

ಸಂಜೀವ ಸದ್ಗುರುನಾಥ ಶಕ್ತನಹುದಖಿಳದೊಳು ಸಕಳಾರ್ಥಪೂರಿತ ಯುಕ್ತನಹುದಯ್ಯ ಶಕ್ತಿಯು ಗುರುಸಮರ್ಥ ಮುಕ್ತಿದಾಯಕ ಮಹಿಪತಿ ಪ್ರಾಣನಾಥ 3

***