Showing posts with label ಜಯ ಜಯ ಜಯ ನರಸಿಂಹ ಜಯ ಜಯ ಮಹಾಲಕ್ಷ್ಮೀರಮಣ prasannashreenivasa. Show all posts
Showing posts with label ಜಯ ಜಯ ಜಯ ನರಸಿಂಹ ಜಯ ಜಯ ಮಹಾಲಕ್ಷ್ಮೀರಮಣ prasannashreenivasa. Show all posts

Thursday, 5 August 2021

ಜಯ ಜಯ ಜಯ ನರಸಿಂಹ ಜಯ ಜಯ ಮಹಾಲಕ್ಷ್ಮೀರಮಣ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ನರಸಿಂಹ ಮಂತ್ರ

ಜಯ ಜಯ ಜಯ ನರಸಿಂಹ
ಜಯ ಜಯ ಮಹಾಲಕ್ಷ್ಮೀರಮಣ
ಜಯ ನಿರಾಮಯ ಸರ್ವೋತ್ಕøಷ್ಟ ಆಹ
ಜಯ ಕಮಲಜ ಮೃಡಾದ್ಯಮರವಂದ್ಯನೆ ನಮೋ
ಭಯಬಂಧಹರ ಭಕ್ತ ಜನರ ರಕ್ಷಕ ಸ್ವಾಮಿ ಪ

ಅರದೂರ ಗುಣಪರಿಪೂರ್ಣ
ಉಗ್ರವೀರನೆ ಮಹಾವಿಷ್ಣು
ಉರುಕಾಂತಿ ಸರ್ವತೋಮುಖನೆ ಆಹ
ನರಸಿಂಹ ಭಯಕರಾಶ್ರಿತಜನರ ರಕ್ಷಕ
ಶರಣಾದೆ ನಿನಗೆ ನಾ ಮೃತ್ಯುಮಾರಕ ನಮೋ 1
ಸೃಷ್ಟಾ ಪಾತಾ ಅತ್ತ ತ್ರಾತಾ
ದುಷ್ಟ ದೈತ್ಯರಿಗತಿ ಕ್ರೂರ
ಶ್ರೇಷ್ಠ ಅಸಮಬಲರೂಪ ಆಹ
ಇಷ್ಟಭಕ್ತನ ಕಾಯೆ ಕಂಬದಿಂದಲಿ ಬಂದು
ತ್ಕøಷ್ಟ ಪ್ರಜ್ವಲಿಪ ನಖದಿ ಸೀಳ್ದೆ ಭ್ರಷ್ಟನ 2
ವಿಶ್ವಸ್ಥ ಬಹಿರಂತವ್ರ್ಯಾಪ್ತ
ವಿಶ್ವ ವಿಷ್ಣು ವಷಟ್ಕಾರ
ಸರ್ವಜ್ಞ ನಿರ್ದೋಷ ಸುಗುಣಿ ಆಹ
ರವಿಕೋಟಿ ಅಮಿತ ಸಕಾಂತಿಯಿಂ ಜ್ವಲಿಸುವೆ
ವಿಶ್ವತೋಮುಖ ಸರ್ವಸಾಕ್ಷಿಸ್ವತಂತ್ರ 3
ನರನಲ್ಲ ನರರೂಪಧಾರಿ
ನೀ ಮೃಗವಲ್ಲವು ಸಿಂಹವದ್ರೂವ
ನರಮೃಗಗಳಲಿ ನೀ ಸಮನು ಆಹ
ಧರೆ ದಿವಿ ಪಾತಾಳ ಜಂತು ಸರ್ವಾಂತಸ್ಥ
ಉರು e್ಞÁನ ಬಲರೂಪ ಅನಂತ ನೀ ಏಕ 4
ನ ಎಂದರೆ ಸರ್ವವಂದ್ಯ
ರ ಎಂದರೆ ಸುಖ ಜ್ಞಾನ
ಸಿಂ ಎಂದರೆ ಗುಣಸಾರ ಆಹ
ಇಂದಿರಾಪತಿ ಮಹದೈಶ್ವರ ರೂಪನು
ಹ ಎಂದರೆ ನೀನು ಪೂರ್ಣ ನಿರ್ದೋಷ 5
ಭೂತಾದಿ ದುಷ್ಟ ಗ್ರಹಗಳ
ಖದ್ರೂಜಾದಿ ಸರ್ವ ವಿಷವ
ನೀ ದಯದಿ ಪರಿಹರಿಪೆ ಆಹ
ಭಕ್ತ ಜನರಿಗೆ ನೀ ಶುಭವಿತ್ತು ಅಕಾಲ
ಮೃತ್ಯುವ ತರಿವ ರಕ್ಷಕ ನಮೋ ಎಂಬೆ 6
ದ್ವಾತ್ರಿಂಶ ಚತುರ್ವಿಂಶಾಕ್ಷರದ
ಮಂತ್ರ ಗಾಯತ್ರಿ ಪ್ರತಿಪಾದ್ಯ
ವೃತತಿಜಾಸನ ಮಂತ್ರ ಋಷಿಯು ಆಹ
ಅಧಿಕಾರಿಗಳು ಇದನು ಶ್ರವಣ ಪಠಣ ಮಾಡೆ
ಭೀತಿ ಮೋಹವÀ ಬಿಡಿಸಿ ನಿಖಿಳೇಷ್ಟವೀವೆ 7
ಜಯ ಜಯ ನರಸಿಂಹಸ್ವಾಮಿ
ಜಯ ಜಯ ಸರ್ವಜ್ಞ ಭೂಮನ್
ಜಯ ಮಹಾ ತೇಜೋಬಲವೀರ್ಯ ಆಹ
ಜಯ ಪುರುಷೋತ್ತಮ ವೇಧಾದಿ ಸುರರಿಂದ
ಇಜ್ಯಪೂಜ್ಯನು ದೃಢಭಕ್ತಿಯಿಂ ಮುದದಿ 8
ನಾರ ಉರು ಗುಣಸಿಂಧು
ನರಸಿಂಹ ಸುಪ್ರೀತನಾಗೊ
ಚಿರಜ್ಞಾನ ಭಕ್ತಿಯ ಸತತ ಆಹ
ಪರಮರಿಲ್ಲದ ಬಲಿ ನಿನ್ನಲಿ ಧ್ಯಾನ
ತೀವ್ರ ಪ್ರೇರಿಸು ಎನಗೆ ಅನಂತ ಅನುತ್ತಮ 9
ಪ್ರೋದ್ಯಾರ್ಕನಿಭ ದೀಪ್ತವಾದ
ವರ್ತುಲ ಉರು ನೇತ್ರತ್ರಯವು
ಹಸ್ತದ್ವಯವು ಜಾನುವರೆಗೂ ಆಹ
ಸುದರ್ಶನಿ ಶಂಖಿ ಮಹಾಲಕ್ಷಿಯುತ ಕೋಟಿ
ಆದಿತ್ಯಾಧಿಕತೇಜ ಉತ್ಕøಷ್ಟ ಶಕ್ತ 10
ಮೀನ ಕಮಠ ಕ್ರೋಡ ನೃಹರಿ
ಮಾಣವ ಪರಶ್ವಿ ಸುಧನ್ವಿ
ಕೃಷ್ಣ ಬುದ್ಧ ಕಲ್ಕಿ ಶರಣ ಆಹ
ವನರುಹನ ತಾತ ಪ್ರಸನ್ನ ಶ್ರೀನಿವಾಸ
ಅನಿಷ್ಟಹ ಇಷ್ಟದ ಎನಗೆ ದಯವಾಗೊ 11
***

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ಗ್ರಂಥಮಾಲಿಕ ಮಧ್ವಸ್ತೋತ್ರ

ಜಯ ಜಯ ಜಯ ಮಧ್ವ ಜಯ ಜಯ
ಜಯ ಮಧ್ವ ಮುನಿರಾಯ ನಿನ್ನ ಚಾರು
ತೋಯಜಾಂಘ್ರಿಯಲಿ ನಾ ಶರಣು ಅಹ
ಮಾಯೇಶನಿಗೆ ಪ್ರಿಯ ಮುಖ್ಯಪ್ರಾಣನೇ ಎನ್ನ
ಕಾಯ ವಾಙ್ಮನ ಕರ್ಮ ದೋಷ ಮನ್ನಿಸಿ ಕಾಯೋ ಪ
ಭಾವಿ ವಿರಂಚಿ ಮಹೋಜ ಜಯಾ -
ದೇವಿ ಸಂಕರ್ಷಣ ತನೂಜ ಸೂತ್ರ
ಸಂವಿದ್ ಬಲಾದಿ ಸುಭ್ರಾಜ ಶ್ರಧ್ಧಾ -
ದೇವಿ ಹೃದಬ್ಜವಿರಾಜ ಅಹ
ಇನಶಶಿ ಋಷಿಕುಲ ತಿಲಕ ಶ್ರೀವರನಂಘ್ರಿ
ವನರುಹ ನಿಷ್ಠ ಹನುಮಭೀಮ ಮಧ್ವ 1
ಜಯತು ಶ್ರೀಹರಿ ರಾಮಚಂದ್ರ ಭಕ್ತ
ಜಯದ ಮೋದದ ಅರ್ತಿಹಂತ ಕೃಷ್ಣ
ಜಯತು ಕಾರುಣ್ಯ ಸಮುದ್ರ ಭಕ್ತ
ಜಯದ ಕ್ಷೇಮದ ಜ್ಞಾನ ಸುಖದ ಅಹ
ರಾಮವಚನ ಕಾರ್ಯರತ ಹನುಮಗೆ ನಮೋ
ನಮೋ ಕುರುಕುಲ ಹರ ಭೀಮ ಕೃಷ್ಣೇಷ್ಟಗೆ 2
ಜಯತು ಶ್ರೀಹರಿ ವೇದವ್ಯಾಸ ಭಕ್ತ
ಜಯದ ಹೃತ್ತಿಮಿರ ನಿರಾಸ ಮಾಳ್ಪ
ಸೂರ್ಯ ಸ್ವಕಾಂತಿ ಪ್ರಕಾಶ ಮಧ್ವ -
ರಾಯಗೆ ನಿಜಗುರು ಶ್ರೀಶ ಅಹ
ವೈದಿಕಶಾಸ್ತ್ರದಿಂದಲೇ ವೇದ್ಯ ಶ್ರೀಶನ
ಹಿತದಿ ನಮಗೆ ತೋರ್ಪಾನಂದ ಮುನಿಗೆ ನಮೋ 3
ಅಸುರರು ಪುಟ್ಟಿ ಭೂಮಿಯಲಿ ಸಾಧು
ಭೂಸುರರೆಂದು ತೋರುತಲಿ ವೇದ
ಶಾಸ್ತ್ರಕ್ಕೆ ಅಪಾರ್ಥ ಪೇಳಿ ಮೋಹ
ವಶವಾಗೆ ಸುಜನರಲ್ಲಿ ಅಹ
ಶ್ರೀಶನಾಜೆÉ್ಞ ಯತಾಳಿ ಮಧ್ವಾಭಿದಾನದಿ
ಮೋಸ ದುರ್ಮತ ಧ್ವಾಂತ ಭಾಸ್ಕರನುದಿಸಿದಿ 4
ಮಧ್ಯಗೇಹರ ಮನೆಯಲ್ಲಿ ಮುಖ್ಯ
ವಾಯುವೇ ಶಿಶುರೂಪ ತಾಳಿ ಬಲ
ವಯಸ್ಸಲ್ಲೇ ಯತಿವರ್ಯರಲ್ಲಿ ಕೊಂಡಿ
ಸಂನ್ಯಾಸ ಸುಪ್ರಮೋದದಲಿ ಅಹ
ಮಧ್ಯಗೇಹರ ಪುರುಷೋತ್ತಮತೀರ್ಥರ
ಭಾಗ್ಯಕ್ಕೆ ಎಣೆವುಂಟೇ ಮೂರ್ಲೋಕದೊಳಗೆ 5
ಪುರುಷೋತ್ತಮಾಚ್ಚ್ಯುತಪ್ರೇಕ್ಷ ತೀರ್ಥ
ಗುರುಗಳ ಸೇವಿಸಿ ಮೋಕ್ಷ ಮೋದ
ಉರುಗುಣಸಿಂಧು ನಿರ್ದೋಷನಾದ
ಶಿರಿವರನು ಕಮಲಾಕ್ಷ ಅಹ
ಭಾರಿ ಪ್ರಸಾದವ ದಯದಿ ಬೀರಲ್ಲೇವೆ
ದೊರೆಯುವದೆಂದು ಬೋಧಿಸಿದೆಯೋ ಮಧ್ವ 6
ಶ್ರೀಶ ವೇದವ್ಯಾಸನಲ್ಲಿ ಗೀತಾ
ಭಾಷ್ಯ ಸಮರ್ಪಿಸಿ ಅಲ್ಯಿಲ್ಲಿ ಉಪ -
ದೇಶಕೊಂಡು ಮತ್ತಿಲ್ಲಿ ಬಂದು
ವ್ಯಾಸನಭಿಪ್ರಾಯದಲ್ಲಿ ಅಹ
ಸರಿಯಾದ ತತ್ವಬೋಧಕ ಗ್ರಂಥಗಳ ಮಾಡಿ
ಬೀರಿದ ಅಧಿಕಾರಿಗಳಿಗೆ ನೀ ದಯದಿ
ಮೂಲಗ್ರಂಥಗಳು ಮೂವತ್ತು ಏಳು 7
ಳಾಳುಕ ಪ್ರಿಯತಮವಾದ್ದು ಭಕ್ತಿ
ಶೀಲತ್ವ ಸುಖಜ್ಞಾನವಿತ್ತು ಪರ -
ದಲ್ಲಿ ಕೈವಲ್ಯ ತೋರುವುದು ಅಹ
ಪುನರಪಿ ಬದರಿಗೆ ಪೋಗಿ ಶ್ರೀಶನ ಕಂಡು
ಧನ್ಯ ಮನದಿ ಬಂದು ಶಾಸ್ತ್ರ ಬೋಧಿಸಿದಿ 8
ಗೀತಾಭಾಷ್ಯವು ಸೂತ್ರ ಭಾಷ್ಯಗೀತಾ
ತಾತ್ಪರ್ಯ ಸೂತ್ರಾಣುಭಾಷ್ಯ ವಿಷ್ಣು
ತತ್ವನಿರ್ಣಯಾ ಋಗ್ಭಾಷ್ಯ ತತ್ವೋ -
ದ್ಯೋತ ಭಾಗವತ ತಾತ್ಪರ್ಯ ಅಹ
ನಿರ್ಣಯ ಶ್ರೀಮಹಾಭಾರತ ತಾತ್ಪರ್ಯ
ನಿರ್ಣಯ ಯಮಕ ಭಾರತ ಕರ್ಮ ನಿರ್ಣಯ 9
ಸನ್ನ್ಯಾಯ ವಿವರಣ ತಂತ್ರಸಾರ
ಅನುವ್ಯಾಖ್ಯಾನವು ಸದಾಚಾರ ಸ್ಮøತಿ
ಅನುತ್ತಮ ದ್ವಾದಶಸ್ತೋತ್ರ ಯತಿ
ಪ್ರಣವ ಕಲ್ಪದಿ ಪ್ರಣವಸಾರ ಅಹ
ಉಪನಿಷದ್ಭ್ಬಾಷ್ಯವು ಹತ್ತು ಉತ್ಕøಷ್ಟವು
ಷಟ್ಟ್ರಶ್ನಕಾಠಕ ಬೃºದಾರಣ್ಯಾಖ್ಯ 10
ಮನನ ಮಾಡಲು ಐತರೇಯ ಪುನಃ
ಶ್ರವಣ ಮಾಡಲು ತೈತಿರೀಯ ಸಂ -
ಚಿಂತಿಸಲು ಈಶಾವಾಸ್ಯ ಬಹು
ಘನವಿದ್ಯಾಯುತವು ಛಾಂದೋಗ್ಯ ಅಹ
ಅರ್ಥವಣಮಾಂಡೂಕ್ಯ ತಲವ ಕಾರೋಕ್ತವು
ಸತತ ಸಂಸ್ಮರಣೀಯ ಜÁ್ಞನದಾಯಕವು11
ಕೃಷ್ಣಾಮೃತ ಮಹಾರ್ಣದಿ ಬಾಲ
ಕೃಷ್ಣ ಜಯಂತಿ ನಿರ್ಣಯದಿ ಭಕ್ತಿ
ಜ್ಞಾನ ಸಾಧನವ ಬೋಧಿಸಿ ನರ -
ಸಿಂಹನ ನಖಸ್ತುತಿ ಮುದದಿ ಅಹ
ಪಠಿಸೆ ಭದ್ರದ ಕಥಾಲಕ್ಷಣದಲಿ ವಾದ
ಮಾಡುವ ಬಗೆ ತೋರ್ದಿಯೈನೃಹರಿಯ ನಮಿಸಿ 12
ಮಾಯಾ ಅವಿದ್ಯಾ ಆವೃತವು ಬ್ರಹ್ಮ
ಅದ್ಯಸ್ಥ ಜಗತೆಂಬ ಮತವ ತರಿದು
ಮಾಯಾವಾದ ಖಂಡನವ ಮಾಡಿ
ನ್ಯಾಯ ಪ್ರಮಾಣ ಲಕ್ಷಣವ ಅಹ
ನುಡಿದು ಪ್ರಪಂಚ ಮಿಥ್ಯಾತ್ವಾನುಮಾನ ಖಂ -
ಡನವ ಉಪಾಧಿಖಂಡನ ಸಹಗೈದಿ 13
ತಾರತಮ್ಯ ಪಂಚಭೇದ ಸತ್ಯ
ಹರಿಯೇ ಸರ್ವೋತ್ತಮ ಸುಹೃದ ಶಿರಿ
ವರನೇ ಸ್ವತಂತ್ರ ಪ್ರಮೋದ ಸ್ವಾಮಿ
ಸೃಷ್ಟಾ ಪಾತಾ ಅತ್ತಾತ್ರಾಹ ಅಹ
ತತ್ವ ವಿವೇಕವು ತತ್ವ ಸಂಖ್ಯಾನವು
ನಿತ್ಯ ಸುಪಠನೀಯ ಹರಿ ಸರ್ವೋತ್ಕøಷ್ಟ 14
ನೀನಿಂತು ನುಡಿಸಿದೀ ನುಡಿಯು ನಿನ್ನ
ಸನ್ನಿಧಾನದಿ ಸಮರ್ಪಣೆಯು ನಾನು
ಏನೂ ಓದದ ಮಂದಮತಿಯು ನೀನು
ಪೂರ್ಣಪ್ರಜ್ಞನು ಜೀವೋತ್ತಮನು ಅಹ
ಎನ್ನ ಕೊರತೆಗಳ ನೀಗಿಸಿ ಹೃಸ್ಥಶ್ರೀ
'ಪ್ರಸನ್ನ ಶ್ರೀನಿವಾಸ' ನ್ನೊ ಲಿಸೋ ಎನಗೆ ಜೀಯ 15
***