Showing posts with label ಸುವ್ವಲಾಲೆ ಸುವ್ವಿ ಸುವ್ವಲಾಲೆ ಸುವ್ವಿ ಕಮಲ ಭವನ ಪಿತನೆ devapura lakshmikanta. Show all posts
Showing posts with label ಸುವ್ವಲಾಲೆ ಸುವ್ವಿ ಸುವ್ವಲಾಲೆ ಸುವ್ವಿ ಕಮಲ ಭವನ ಪಿತನೆ devapura lakshmikanta. Show all posts

Monday, 2 August 2021

ಸುವ್ವಲಾಲೆ ಸುವ್ವಿ ಸುವ್ವಲಾಲೆ ಸುವ್ವಿ ಕಮಲ ಭವನ ಪಿತನೆ ankita devapura lakshmikanta

ಸುವ್ವಲಾಲೆ ಸುವ್ವಿ ಸುವ್ವಲಾಲೆ

ಸುವ್ವಿ ಕಮಲ ಭವನ ಪಿತನೆ ಸುವ್ವಿ ಅಮರಸುತನ ಸಖನೆ ಪ

ಸುವ್ವಿ ಉಮೆಯ ಪತಿಯಸಖನೆ

ಸುವ್ವಿರಮೆಯ ಪತಿಯಚ್ಯುತನೆ ಅ.ಪ

ಚಂದ್ರಕಾಂತದೊರಳ ಕಡೆದು

ಇಂದ್ರನೀಲ ಹೊನಿಗೆ ವಿಡಿದು

ಸಾಂದ್ರ ಕುಂತಳೆಯರು ನೆರದು ಸರಸಮಿಗೆ

ಯಿಂದ ನಲಿದು ಸುವ್ವಿಲಾಲೆ 1

ಸೇರಿಸಿದ್ದ ಸೆರಗು ಜಾರೆ

ವೋರೆದುರುಬ ಹೊಗರು ಮೀರೆ

ಸಾರೆ ಕಸ್ತೂರಿ ಪರಿಮಳವಿರೆ

ಸರಸಗುಣದಿಂದ ಮಿತ್ರೆ 2

ಹರಿಣಲೋಚನೆಯರು ಕೂಡಿ

ಹರುಷಮಿಗೆ ನಲಿದಾಡಿ

ಧರೆಯೊಳಮರ ಪುರಿಯ ನೋಡಿ

ಧೊರೆಯು ಲಕ್ಷ್ಮೀಪತಿಯ ಪಾಡಿ 3

****