ದೀಪಾವಳಿ ಆರತಿ
ಮಂಗಳಾರತಿ ಮಾಡೋಣಾ ಬನ್ನಿ ಮುದ್ದು ರಮಾ ರಮಣಗೆ
ಕಂಗಳ ಆರತಿ ಭಕ್ತಿಪೂರ್ವಕ ಪ್ರಸನ್ನ ಮಾಡೋಣಾ ಹರಿಗೆ||
ಪಿತೃ ವಚನ ಪಾಲಿಸಿದ ಕೌಸಲ್ಯ ನಂದನ ರಾಮಗೆ|
ಮಾತೃ ಇಚ್ಚೆ ಪೂರ್ಣ ಮಾಡಿದ ಸೀತಾ ರಮಣಗೆ||
ಭೂಭಾರ ಹರಣ ಮಾಡಿದ ಧರ್ಮ ಸಂಸ್ಥಾಪಕಗೆ|
ಸುಭದ್ರಾ ಪತಿ ಸಾರಥಿ ಆದ ರುಕ್ಮಿಣಿ ರಮಣಗೆ||
ಪಕ್ಷಿ ವಾಹನ ರಕ್ಷಕ ನಮ್ಮ ಇವನೇ ಕೃಪಾವತ್ಸಲಾ|
ಅಕ್ಷಯ ಫಲ ಮೋಕ್ಷ ದಾತಾ ರಾಮಾಮೃತ ವಿಠ್ಠಲಾ||
***