Tuesday, 13 April 2021

ಮಂಗಳಾರತಿ ಮಾಡೋಣಾ ಬನ್ನಿ ಮುದ್ದು ankita ramamruta vittala ದೀಪಾವಳಿ ಆರತಿ aarati

 ದೀಪಾವಳಿ ಆರತಿ 


ಮಂಗಳಾರತಿ ಮಾಡೋಣಾ ಬನ್ನಿ ಮುದ್ದು ರಮಾ ರಮಣಗೆ 

ಕಂಗಳ ಆರತಿ ಭಕ್ತಿಪೂರ್ವಕ ಪ್ರಸನ್ನ ಮಾಡೋಣಾ ಹರಿಗೆ||


ಪಿತೃ ವಚನ ಪಾಲಿಸಿದ ಕೌಸಲ್ಯ ನಂದನ ರಾಮಗೆ|

ಮಾತೃ ಇಚ್ಚೆ ಪೂರ್ಣ ಮಾಡಿದ ಸೀತಾ ರಮಣಗೆ||


ಭೂಭಾರ ಹರಣ ಮಾಡಿದ ಧರ್ಮ ಸಂಸ್ಥಾಪಕಗೆ|

ಸುಭದ್ರಾ ಪತಿ ಸಾರಥಿ ಆದ ರುಕ್ಮಿಣಿ ರಮಣಗೆ||


ಪಕ್ಷಿ ವಾಹನ ರಕ್ಷಕ ನಮ್ಮ ಇವನೇ ಕೃಪಾವತ್ಸಲಾ|

ಅಕ್ಷಯ ಫಲ ಮೋಕ್ಷ ದಾತಾ ರಾಮಾಮೃತ ವಿಠ್ಠಲಾ||

***


No comments:

Post a Comment