ಇರಬೇಕು ಇದ್ದರು ಇಲ್ಲದಿರಬೇಕು ಪ
ಹರಿಯಲ್ಲಿ ಮನವಿಟ್ಟು ತೊರೆದು ಮಮತೆ ಭವದಿ ಅ.ಪ.
ಪರದೈವ ಹರಿಯೆಂದು ದೃಢದಿಂದಲಿರಬೇಕು
ಗುರುವಾಯು ಸರಿಯೆಂದು ಗುರುಭಕ್ತಿಮಾಡಬೇಕು
ಹರಿಯ ಕರುಣ ವಿಲಾಸದಿಂದಲಿ
ತರಿದು ತನುಗತ ವೈರಿ ವೃಂದವ ಸ್ಮರಿಸಿ ಸ್ಮರಿಸುತ
ಕ್ರಮದಿ ಬಿಂಬನ ಪರಮ ಸುಖದಿಂ e್ಞÁನ ಘಳಿಸುತ 1
ತಿಳಿಯಬೇಕೊ ವಿದ್ಯೆ ತುಳಿಯಬೇಕಾವಿದ್ಯೆ
ಬೆಳಿಸಬೇಕು ಭಕ್ತಿ ಹಳಿಯಬೇಕು ಹಂಮದ
ನಳಿನ ನಯನನ ಆಳುವೆಂಬುದ ತಿಳಿದು ತವಕದಿ ದೊರೆಯ
ಮೆಚ್ಚಿಸೆ ಪುಳುಕಿತಾಂಗದಿ ಕ್ರಮವನಡೆಸುತ
ತೊಳಳಿಬಳಲಿದೆ ಬಹಳ ವುದರಕೆ 2
ಹರಿಯಿತ್ತದುಣಬೇಕು ಸಮಚಿತ್ತವಿರಬೇಕು
ಹರಿಗಿತ್ತುಮಣಿಬೇಕು ಧೊರೆ ಚಿತ್ತವೆನಬೇಕು
ಪರರ ಬೇಡದೆ ಬಿಡುತ ಹರಿಯನು ಸಿರಿಗುಪ್ರೇರಕ ವಿಷ್ಣುವೆನ್ನುತ
ಅರಿತು ಕ್ರಮದಿಂ ತಾರತಮ್ಯವನೆರಗಿ
ಹಿರಿಯರಕರುಣ ಪಡೆಯುತ 3
ಮಂತ್ರಸಿದ್ಧಿಯು ಬೇಕು ತಂತ್ರ ವೃಂದವು ಬೇಕು
ಯಂತ್ರವಾಹಕ ಹರಿಯ ಸ್ವಾತಂತ್ರವರಿಯಬೇಕು
ಶಾಸ್ತ್ರ ಚರ್ಚೆಯ ಮಾಡಿಮಾಡುತ
ಕಂತುಪಿತನೇಕಾಂತ ಭಕ್ತರ
ಮುಟ್ಟಿಭಜಿಸುತ ಪ್ರೇಮದಿಂ ಶ್ರೀಕಾಂತ ಭೃತ್ಯರ
ಭಾಗ್ಯ ಪಡೆಯುತ 4
ತೀರ್ಥಯಾತ್ರೆಯು ಬೇಕು ಗಾತ್ರ ಶುದ್ಧಿಯುಬೇಕು
ಪಾತ್ರವರಿಯುತ ದಾನವಿತ್ತು ಪೂಜಿಸಬೇಕು ಪುತ್ರಮಿತ್ರ
ಕಳತ್ರ ಗತಹರಿ ತುತ್ತುವುಣ್ಣಿಸಿ ಜಗವ ಸಲಹುವ
ನೆಂತು ತಿಳಿಯುತ ರತಿಯಮಾಡುತ ಆತ್ಮಗತ
“ಶ್ರೀಕೃಷ್ಣವಿಠಲ”ನ ಕರುಣ ಪಡೆಯಲು 5
***