Showing posts with label ಕೃತ ಕೃತ್ಯನಾದೆನಿಂದಿನ ದಿನದಲಿ jagannatha vittala. Show all posts
Showing posts with label ಕೃತ ಕೃತ್ಯನಾದೆನಿಂದಿನ ದಿನದಲಿ jagannatha vittala. Show all posts

Saturday, 14 December 2019

ಕೃತ ಕೃತ್ಯನಾದೆನಿಂದಿನ ದಿನದಲಿ ankita jagannatha vittala

ಕೃತಕೃತ್ಯನಾದೆನಿಂದಿನ ದಿನದಲಿ
ವ್ರತಿ ಕುಲೋತ್ತಂಸ ಭುವನೇಂದ್ರರಾಯರ ಕಂಡು ||pa||

ಗಂಗಾ ಪ್ರಯಾಗ ಗಯಾ ನೈಮಿಷಾರಣ್ಯ ಕುರು
ಜಾಂಗಳಾದ್ಯಖಿಳ ಸುಕ್ಷೇತ್ರಗಳಲಿ
ಸಾಂಗ ಕರ್ಮಗಳ ಹರಿಗರ್ಪಿಸಿದ ಫಲವು ಮುನಿ
ಪುಂಗವರ ಕಂಡ ಮಾತ್ರದಿ ಸಮನಿಸಿತೆನಗೆ ||1||

ಹಿಂದೆ ಬಹು ಜನ್ಮದಿ ಮಾಡಿದ ಸುಕೃತಕೆ ಕ
ರ್ಮಂದೀಶ್ವರನ ದಿವ್ಯ ಪಾದ ಕಮಲ
ಸಂದರ್ಶನವೆ ಮಹತ್ಪಲವಾಯಿತೆನಗೆ ಗೋ
ವಿಂದನ ಪ್ರತಿಬಿಂಬರಾದ ಕಾರಣದಿಂದ ||2||

ಅನ್ಯಸಾಧನೆಗಳಿನ್ನಾಚರಿಸಲ್ಯಾಕೆ ಮ
ತ್ತನ್ಯರಾರಾಧನೆಯ ಮಾಡಲ್ಯಾಕೆ
ಸನ್ನುತ ಮಹಿಮ ಜಗನ್ನಾಥ ವಿಠಲನ ಕಾ
ರುಣ್ಯ ಪಾತ್ರರಾ ಕರುಣವಾಯಿತೆನ್ನೊಳಿಂದು ||3||
***

Kruta krutyanadenindina dinadali
Vratikulottamsa buvanendrarayara kandu ||pa||

Ganga prayaga gaya naimisharanya kuru|
Jangaladyakila sukshetragalali||
Sanga karmagalu harigarpisida Palavu muni |
Pungavara kanda matradi samavenisitu enage ||1||

Hinde bahu janumadali madida sukrutake ka-
Rmandisvarana divya pada kamala|
Sandarusanave mahatpalavayitenage go|
Vindana prati bimbarada karanadinda ||2||

Anya sadhanagalinna charisalyake|
Mattanyararadhaniya madalyake||
Sannuta mahima jagannathavithalana ka|
Runya pratara karunavayitennolagindu ||3||
***