Showing posts with label ನಿಂತು ಬೇಡುವೆನ್ವರವ bheemesha krishna. Show all posts
Showing posts with label ನಿಂತು ಬೇಡುವೆನ್ವರವ bheemesha krishna. Show all posts

Wednesday, 1 September 2021

ನಿಂತು ಬೇಡುವೆನ್ವರವ ankita bheemesha krishna

 ..

ರಾಗ - : ತಾಳ -


ನಿಂತು ಬೇಡುವೆನ್ವರವ ll ಪ ll


ನಿಂತು ಬೇಡುವೆ  ಎನ್ನಲ್ಲಂತಃಕರಣ ಮಾಡ್ಯಭ್ಯಂತರಿಲ್ಲದೆ ಲಕ್ಷೀಕಾಂತ ನೀ ಸಲಹೆಂದು ll 1 ll


ಶಂಖ ಚಕ್ರವು ಗದಾಪದ್ಮ ಧರಿಸಿದಕ

ಳಂಕ ಮಹಿಮ ನಿನ್ನ  ಕಿಂಕರ ನಾನೆಂದು ll 2 ll


ಕಮಲನಾಭನೆ ಕಮಲಾಪತಿ ನಿನ್ನಂಘ್ರಿ

ಕಮಲಕ್ವಂದಿಸುವೆನು ಕಮಲಾಕ್ಷದಿ ನೋಡೊ ll 3 ll


ಆಶೀಲೆ ಬಂದೆನಾದಿಶೈಲವಾಸನೆ

ದಾಸರಿಗ್ವೊಲಿವ ಭೀಮೇಶಕೃಷ್ಣನೆ ನಿನ್ನ ll 4 ll

***


ನಿಂತು ಬೇಡುವೆನ್ವರವ ಪ

ನಿಂತು ಬೇಡುವೆ ಎನ್ನಲ್ಲಂತಃಕರಣ ಮಾಡ್ಯ-

ಭ್ಯಂತರಿಲ್ಲದೆ ಲಕ್ಷ್ಮೀಕಾಂತ ನೀ ಸಲಹೆಂದು 1


ಶಂಖ ಚಕ್ರವು ಗದಾಪದ್ಮ ಧರಿಸಿದಕ-

ಳಂಕ ಮಹಿಮ ನಿನ್ನ ಕಿಂಕರ ನಾನೆಂದು2


ಕಮಲನಾಭನೆ ಕಮಲಾಪತಿ ನಿನ್ನಂಘ್ರಿ

ಕಮಲಕ್ಕ ್ವಂದಿಸುವೆನು ಕಮಲಾಕ್ಷದಿ ನೋಡೊ 3


ಆಶೀಲೆ ಬಂದೆನಾದಿಶೈಲವಾಸನೆ

ದಾಸರಿಗ್ವೊಲಿವ ಭೀಮೇಶಕೃಷ್ಣನೆ ನಿನ್ನ 4

***