..
kruti by Nidaguruki Jeevubai
ಬಾ ಹರಿ ಬಾ ಹರಿ ಬಾ ಹರಿ ಬೇಗ
ಶ್ರೀಹರಿ ಶೌರಿ ಮುರಾರಿಯೆ ಬೇಗ ಪ
ಅಂದಿಗೆ ಕಿರುಗೆಜ್ಜೆಗಳೊಲಿಯುತಲಿ
ಚಂದದಿಂದಲಿ ನಲಿದಾಡುತ ಬಾರೈ 1
ಗುರುಳು ಕೂದಲು ಮುಖಹೊಳೆವೊ ಮುರಾರಿ
ಪÀಣೆಯೊಳು ತಿಲುಕದ ಹೊಳೆವ ಶೃಂಗಾರಿ2
ಥಳಥಳಿಸುವ ಪೀತಾಂಬರ ಧಾರಿ
ಎಳೆತುಳಸಿಯ ವನಮಾಲೆಯ ಶೌರೀ 3
ಕಂಕಣ ಕರ ಭೂಷಣಗಳು ಹೊಳೆಯೆ
ಟೊಂಕದಿ ಕರಗಳನಿಡುತಲಿ ಬಾರೈ 4
ಕಾಮನಪಿತ ಕೊಳಲೂದುವ ಸೊಬಗು
ಕಮಲನಾಭ ವಿಠ್ಠಲ ಬಲು ಬೆಡಗು5
***