Thursday 5 August 2021

ಬಾ ಹರಿ ಬಾ ಹರಿ ಬಾ ಹರಿ ಬೇಗ ankita kamalanabha vittala

 ..

kruti by Nidaguruki Jeevubai

ಬಾ ಹರಿ ಬಾ ಹರಿ ಬಾ ಹರಿ ಬೇಗ

ಶ್ರೀಹರಿ ಶೌರಿ ಮುರಾರಿಯೆ ಬೇಗ ಪ


ಅಂದಿಗೆ ಕಿರುಗೆಜ್ಜೆಗಳೊಲಿಯುತಲಿ

ಚಂದದಿಂದಲಿ ನಲಿದಾಡುತ ಬಾರೈ 1


ಗುರುಳು ಕೂದಲು ಮುಖಹೊಳೆವೊ ಮುರಾರಿ

ಪÀಣೆಯೊಳು ತಿಲುಕದ ಹೊಳೆವ ಶೃಂಗಾರಿ2


ಥಳಥಳಿಸುವ ಪೀತಾಂಬರ ಧಾರಿ

ಎಳೆತುಳಸಿಯ ವನಮಾಲೆಯ ಶೌರೀ 3


ಕಂಕಣ ಕರ ಭೂಷಣಗಳು ಹೊಳೆಯೆ

ಟೊಂಕದಿ ಕರಗಳನಿಡುತಲಿ ಬಾರೈ 4

ಕಾಮನಪಿತ ಕೊಳಲೂದುವ ಸೊಬಗು

ಕಮಲನಾಭ ವಿಠ್ಠಲ ಬಲು ಬೆಡಗು5

***


No comments:

Post a Comment