Showing posts with label ಕೈಲಾಸದಾಶೆಯಲ್ಲಿ ಹುದೊಶೈಲೇಂದ್ರ hayavadana. Show all posts
Showing posts with label ಕೈಲಾಸದಾಶೆಯಲ್ಲಿ ಹುದೊಶೈಲೇಂದ್ರ hayavadana. Show all posts

Saturday, 14 December 2019

ಕೈಲಾಸದಾಶೆಯಲ್ಲಿ ಹುದೊಶೈಲೇಂದ್ರ ankita hayavadana

ಕೈಲಾಸದಾಶೆಯಲ್ಲಿ ಹುದೊಶೈಲೇಂದ್ರ 
ಸುತೆಯರಸ ಶಿವನ ಒಲವಿಲ್ಲದವಗೆ ಪ.


ಗುರುಹಿರಿಯರರಿಯದಗೆ ಪರಗತಿಯ ತೊರೆದವಗೆವರಧರ್ಮಪಥವ ಮರೆದವಗೆದುರುಳರನೆ ಪೊರೆದು ಪರಸತಿಯ ನೆರೆದವಗೆ 1


ದೀನಜನರೊಡನಾಡಿ ಹೀನಕರ್ಮವ ಮಾಡಿಆನೆಂಬ ಮಮತೆಯನೆ ಕೂಡಿದಾನವನೆ ಬೇಡಿ ದುರ್ದಾನಕೆ ಮರುಳಹಗೆ 2


ಅನಾಚಾರಂಗಳ ಬಿಡÀದೆ ಮನೆಗೆ ಬಂದರು ಕೊಡದೆಧನದ ಗಂಟುಗಳನು ಕಡಿಯದೆಅನುಸರಿಸಿ ನಡೆಯದೆ ಪರರ ಜರಿದು ನುಡಿವವಗೆ 3


ವಾದಿರಾಜನ ನುಡಿಯ ಹಿತವೆಂದು ಲಾಲಿಸದೆಕ್ರೋಧಮಯನಾಗಿ ದೂಷಿಪಗೆಪಾದಕೆರಗದೆ ಜನನಿಯನಾದರಿಸದವಗೆ 4


ಹಯವದನನಲ್ಲೆಂದು ತಾನೆಲ್ಲ ಬಲ್ಲೆಯೆಂದುದಯವುಳ್ಳವರ ದೈವನೆನದೆ ಈಸ್ವಯಂಭು ಲಿಂಗದ ಕಲ್ಲೇ ದೈವವೆಂಬುವಗೆ 5
******