Showing posts with label ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ neleyadikeshava. Show all posts
Showing posts with label ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ neleyadikeshava. Show all posts

Wednesday, 1 September 2021

ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ankita neleyadikeshava

 ..

ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ಪ


ಬಲ್ಲಿದವರ ಭಂಗ ಪಡಿಸಿದೆ ನಿನಗೆಣೆ-ಯಿಲ್ಲ ಶನೈಶ್ಚರನೆ ಅ


ಹರಿಹರ ಬ್ರಹ್ಮಾದಿಗಳ ಭಂಗಪಡಿಸಿದೆ ಕರುಣವಿಲ್ಲವೆ ನಿನಗೆ ಹರಿಶ್ಚಂದ್ರ ನಳಚಕ್ರವರ್ತಿ ಷೋಡಶ ಮಹಾರಾಯ ಪಾಂಡ್ಯರ ದಣಿಸಿ ತೋರಿಸಿದೆ ಮನೆ ಮನೆ ವಾರ್ತೆಗಳೆಲ್ಲವ ತಿರಿದುಂಡು ಮರುಳುಗೊಂಡು ಪರರ ಪೀಡಿಸಿ ಭ್ರಮೆಪಟ್ಟು ಲಜ್ಜೆಗೆಟ್ಟು ತಿರುಗುವಂದದಿ ಮಾಡಿದೆ 1


ಕಟ್ಟಿದ ಪಶು ಕರೆಯದು ತಾನಾಡಿದ ಮಾತು ಕಟ್ಟದು ಸಭೆಯೊಳಗೆ ಮೆಟ್ಟಿದ ನೆಲ ಮುನಿವುದು ಹೊನ್ನ ಹಿಡಿದರೆ ಬಕ್ಕಟ್ಟೆ ಬಯಲಹುದು ಉಟ್ಟದ್ದು ಹಾವಾಗಿ ಹರಿವುದು ಸಾಲಿ-ಗರಟ್ಟುಳಿ ಘನವಹುದು ಮುಟ್ಟ ಹೇಸುವರು ಕುರುಹ ನಾರಿಯರು ನೆಂಟರಿಷ್ಟರೆ ಕಾಣರು 2


ವಿದ್ಯೆ ಬುದ್ಧಿಗಳೇನು ಫಲವು ನೆನೆದ ಕಾರ್ಯ ಸಿದ್ಧಿಯಾಗದೆನಗೆ ಮುದ್ದು ಮುಖದಿ ಮಾರುತ್ತರವ ಕೊಡುವ ಸತಿ ಬದ್ಧದ್ವೇಷದಿ ಬೈವಳು ಇದ್ದ ಮನುಜರ ಪಾಡೇನು ನೀ ಬಂದು ಹೊದ್ದಿದ ಮಾತ್ರದಲಿ ನಿದ್ದೆ ಹಸಿವು ಬಳಲಿಕೆ ದಟ್ಟ-ದಾರಿದ್ರ್ಯವು ಕೈಗೊಂಬುದು 3


ಒಳ್ಳೆದಾಗಿದ್ದ ಸಂಗಾತಿಯ ಸ್ನೇಹವೆಲ್ಲವನು ಬಿಡಿಸಿ ಅಲ್ಲಲ್ಲಿ ಕೊಡುವ ದಾನಿಗಳ ಮನದಿ ಪೊಕ್ಕು ಇಲ್ಲಿಲ್ಲ ಹೋಗೆನಿಸಿ ಇಲ್ಲದ ಅಪವಾದ ಭಾಳ ಕಂಟಕ-ರೋಗದಲ್ಲಿ ನೋಯಿಸಿ ಒಲ್ಲೆನೀ ಜನ್ಮವೆಂದೆನಿಸಿ ಸಾಧಿಸಿ ಕಡೆಯಲ್ಲಿ ಗುಣ ತೋರಿಸಿ4


ದೇಶದೇಶದ ರಾಯರ್ಗಳನೆಲ್ಲರನು ಪರದೇಶಿಗಳನು ಮಾಡಿದೆ ವಾಸವನೆ ಬಿಡಿಸಿ ತಿರುಗಿಸಿ ಗಾಸಿ-ಯಿಂದಲೆ ನೋಯಿಸಿ ಶೇಷಶಯನ ಸರ್ವೇಶ ದೇವೇಶನೆ ಲೇಸು ಪಾಲಿಸೊ ಎನಗೆ ದೇಶದಂತರ್ಯಾಮಿ ನೆಲೆಯಾದಿಕೇಶವತೋಷದಿ ಸಲಹೊ ಎನ್ನ 5

***