by ಪ್ರಸನ್ನವೆಂಕಟದಾಸರು
ಅಂಜಿಕ್ಯಾಕೆನಗಂಜಿಕೆ
ಕಂಜನಾಭ ಶ್ರೀನಿವಾಸನ ದಯವಿರಲು ||ಪ||
ಅಶನವಸನವನ್ನು ಕುಳಿತಲ್ಲೆ ನಡೆಸುವ
ನಿಶಿದಿನ ನೀಚರಾಧೀನ ಮಾಡದೆ
ಹಸನಾಗಿ ತನ್ನಂಘ್ರಿ ನೆರಳೊಳು ಬಿಚ್ಚಿಟ್ಟು
ಕುಶಲದಿ ಸಾಕುವ ದ್ರೆಯ ನಂಬಿದ ಬಳಿಕ ||೧||
ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳ
ಕ್ಷುಲ್ಲ ಜೀವರನೆಲ್ಲ ಕಾಯುವ ಶಕ್ತಿ
ಎಲ್ಲ ವ್ಯವಹಾರವ ಮಾಡುವ ಬಲ ನನ-
ಗಿಲ್ಲೆಂದು ಆಯಾಸಬಡಲೀಸದವನಿರೆ ||೨||
ಆವಾವ ಕಾಲದಿ ಆವಾವ ದೇಶದಿ
ಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸ
ಭಾವಿಕರೊಡೆಯ ಪ್ರಸನ್ವೆಂಕಟಾದ್ರೀಶ
ಸಾವು ಕಳೆದು ಜೀವಕಾಶ್ರಯನಾಗಿರೆ ||೩||
****
ಅಂಜಿಕ್ಯಾಕೆನಗಂಜಿಕೆ
ಕಂಜನಾಭ ಶ್ರೀನಿವಾಸನ ದಯವಿರಲು ||ಪ||
ಅಶನವಸನವನ್ನು ಕುಳಿತಲ್ಲೆ ನಡೆಸುವ
ನಿಶಿದಿನ ನೀಚರಾಧೀನ ಮಾಡದೆ
ಹಸನಾಗಿ ತನ್ನಂಘ್ರಿ ನೆರಳೊಳು ಬಿಚ್ಚಿಟ್ಟು
ಕುಶಲದಿ ಸಾಕುವ ದ್ರೆಯ ನಂಬಿದ ಬಳಿಕ ||೧||
ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳ
ಕ್ಷುಲ್ಲ ಜೀವರನೆಲ್ಲ ಕಾಯುವ ಶಕ್ತಿ
ಎಲ್ಲ ವ್ಯವಹಾರವ ಮಾಡುವ ಬಲ ನನ-
ಗಿಲ್ಲೆಂದು ಆಯಾಸಬಡಲೀಸದವನಿರೆ ||೨||
ಆವಾವ ಕಾಲದಿ ಆವಾವ ದೇಶದಿ
ಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸ
ಭಾವಿಕರೊಡೆಯ ಪ್ರಸನ್ವೆಂಕಟಾದ್ರೀಶ
ಸಾವು ಕಳೆದು ಜೀವಕಾಶ್ರಯನಾಗಿರೆ ||೩||
****
An̄jikyākenagan̄jike kan̄janābha śrīnivāsana dayaviralu || PA ||
aśanavasanavannu kuḷitalle naḍesuva niśidina nīcarādhīna māḍade hasanāgi tannaṅghri neraḷoḷu bicciṭṭu kuśaladi sākuva dhoreya nambida baḷika || 1 ||
hullu kacci kallu hottu dhanavanuḷḷa kṣullaka cittava kāyuvāsakti ella vyavahārava māḍuva bala nana- gillendu āyāsabaḍalīsadavanire || 2 ||
āva dēśadalire āva kāladalire sēvege nā tappe kr̥pe tappisā bhāvikaroḍeya śrī prasanveṅkaṭādrīśā sāvu kaḷedu jīvakāśrayanāgire || 3 ||
Plain English
Anjikyakenaganjike kanjanabha srinivasana dayaviralu || PA ||
asanavasanavannu kulitalle nadesuva nisidina nicaradhina madade hasanagi tannanghri neralolu biccittu kusaladi sakuva dhoreya nambida balika || 1 ||
\hullu kacci kallu hottu dhanavanulla ksullaka cittava kayuvasakti ella vyavaharava maduva bala nana- gillendu ayasabadalisadavanire || 2 ||
ava desadalire ava kaladalire sevege na tappe krpe tappisa bhavikarodeya sri prasanvenkatadrisa savu kaledu jivakasrayanagire || 3 ||
***
ಅಂಜಿಕ್ಯಾಕೆನಗಂಜಿಕೆ
ಕಂಜನಾಭ ಶ್ರೀನಿವಾಸನ ದಯವಿರಲು || PA ||
ಅಶನವಸನವನ್ನು ಕುಳಿತಲ್ಲೆ ನಡೆಸುವ
ನಿಶಿದಿನ ನೀಚರಾಧೀನ ಮಾಡದೆ
ಹಸನಾಗಿ ತನ್ನಂಘ್ರಿ ನೆರಳೊಳು ಬಿಚ್ಚಿಟ್ಟು
ಕುಶಲದಿ ಸಾಕುವ ಧೊರೆಯ ನಂಬಿದ ಬಳಿಕ || 1 ||
ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳ
ಕ್ಷುಲ್ಲಕ ಚಿತ್ತವ ಕಾಯುವಾಸಕ್ತಿ
ಎಲ್ಲ ವ್ಯವಹಾರವ ಮಾಡುವ ಬಲ ನನ-
ಗಿಲ್ಲೆಂದು ಆಯಾಸಬಡಲೀಸದವನಿರೆ || 2 ||
ಆವ ದೇಶದಲಿರೆ ಆವ ಕಾಲದಲಿರೆ
ಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸಾ
ಭಾವಿಕರೊಡೆಯ ಶ್ರೀ ಪ್ರಸನ್ವೆಂಕಟಾದ್ರೀಶಾ
ಸಾವು ಕಳೆದು ಜೀವಕಾಶ್ರಯನಾಗಿರೆ || 3 ||
***
|ಅಂಜೀಕಿನ್ನ್ಯಾತಕಯ್ಯ ಸಜ್ಜನರಿಗೆ|
|ಸಂಜೀವರಾಯನ ಸ್ಮರಣೆ ಮಾಡಿದ ಮೇಲೆ||
✍️ನಮ್ಮ ಬದುಕಿಗೆ,ಉಸುರಿಗೆ ದೇವತೆಯಾಗಿದ್ದು ಸಂಜೀವಎಂದೇ ಎನಿಸಿರುವ*
ಶ್ರೀ ಮುಖ್ಯ ಪ್ರಾಣರನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದಲ್ಲಿ ಯಾವುದೇ ಬಗೆಯ ಅಂಜಿಕೆಗೆ,ಆಪತ್ತಿಗೆ ಅವಕಾಶ ಇಲ್ಲ.. ಅಂತ ನಮ್ಮ ದಾಸವರ್ಯರು ನುಡಿದ ಹಾಗು ನೀಡಿದ ಅಭಯವಚನ..
ಮತ್ತೆ ಇದಕ್ಕೆ ಏನಾದರು ಉದಾಹರಣೆ ಉಂಟೋ??
ಉಂಟು..
ಅದನ್ನು ನಾವುಗಳು ರಾಮಾಯಣದಲ್ಲಿ ಪ್ರಸ್ತಾಪ ಮಾಡುವ ಮೈನಾಕ ಪರ್ವತ ಈ ಮಾತಿಗೆ ಉತ್ತಮ ನಿದರ್ಶನ.
ಸಮುದ್ರೊಲ್ಲಂಘನದಲ್ಲಿ ತೊಡಗಿದ್ದ ಶ್ರೀಹನುಮಂತ ದೇವರಿಗೆ,ದಾರಿಯಲ್ಲಿ ಮೈನಾಕ ಪರ್ವತ ಅಡ್ಡ ಬಂದು,ತನ್ನ ಆತಿಥ್ಯ ಸ್ವೀಕರಿಸಿ ಹೋಗಬೇಕು ಎಂದು ಪ್ರಾರ್ಥನೆ ಮಾಡುತ್ತಾನೆ. ಆದರೆ
" ಪ್ರಭುವಾದ ಶ್ರೀರಾಮ ದೇವರ ಕಾರ್ಯ ವಿಳಂಬವಾಗುವದು ಎನ್ನುವ ಉದ್ದೇಶದಿಂದ ಆಂಜನೇಯ ದೇವ ಅವನ ಆತಿಥ್ಯವನ್ನು,ಸ್ವೀಕರಿಸದೇ,
ತನ್ನ ಬರಿಯ ಕೈಯಿಂದಲೇ ಅವನನ್ನು ಮುಟ್ಟಿ ಆಶೀರ್ವದಿಸಿದರು..
ಯಾವಾಗ ಸಂಜೀವ ರಾಯನ ಸ್ಪರ್ಶ ಆದಕೂಡಲೇ ಅವನ ಅಂಜಿಕೆ ದೂರವಾಯಿತು.
ಅವನಿಗೆ ಇದ್ದ ಅಂಜಿಕೆ ಯಾವುದು ಎಂದರೆ
ಮೈನಾಕರಾಜ ತನ್ನ ರೆಕ್ಕೆಗಳನ್ನು ತುಂಡರಿಸಿ ಹೊರಟಿದ್ದ ಇಂದ್ರದೇವನ ಕಣ್ಣು ತಪ್ಪಿಸಿಕೊಂಡು ಸಮುದ್ರ ದೊಳಗೆ ಮುಳುಗಿದ್ದನು..
ಯಾವಾಗ ಶ್ರೀಹನುಮಂತದೇವರಿಗೆ ಆತಿಥ್ಯ ಮಾಡಲು ನಿಂತ ಅವನನ್ನು ಕಂಡು ದೇವೇಂದ್ರರು ಬಲು ಪ್ರಸನ್ನರಾಗಿ ಅವನಿಗೆ ಅಭಯವನ್ನು ನೀಡುತ್ತಾರೆ.
"ನಿನಗೆ ಯಾವುದೇ ಭಯವಿಲ್ಲ ಎಂದು ಆಶೀರ್ವದಿಸುತ್ತಾರೆ."
ಹೀಗೆ ಮೈನಾಕ ಪರ್ವತ ವು ಸಂಜೀವರಾಯನ ಸೇವೆಯನ್ನು ಮಾಡಿ ತನಗೆ ಇದ್ದ ದೇವೇಂದ್ರರ ಅಂಜಿಕೆಯನ್ನು ಕಳೆದುಕೊಂಡನು.
ನಾವು ಸಹ ಹನುಮಂತದೇವರ ಅವರ ಅಂತರ್ಯಾಮಿಯಾದ ಆ ಶ್ರೀ ಹರಿಯ ಉಪಾಸನೆ, ಸೇವೆ ಮಾಡಿದರೆ ಇತರ ಕ್ಷುದ್ರ ಶಕ್ತಿಗಳ,ವಾಮಾಚಾರ.ಇನ್ನೂ ಅನೇಕ ಮತ್ತು, ದುಷ್ಟ ಜನರ ಭಯ ಸಹ ದೂರವಾಗುವದು ಎಂಬುದಕ್ಕೆ ಸಂದೇಹವಿಲ್ಲ ..
ಅದಕ್ಕೆ ದಾಸರು ಹೇಳಿದ್ದು
ಅಂಜಿಕೆ ಇನ್ಯಾತಕಯ್ಯ ಸಜ್ಜನರಿಗೆ ಅಂತ..
ಅವರೆಲ್ಲರೂ ತಮ್ಮ ಅಂಜಿಕೆ ಕಳೆದುಕೊಂಡರು..ಇನ್ನೂ ನಾವು ಅಂಜಿಕೆಯನ್ನು ಕಳೆದುಕೊಳ್ಳುವ ಹಾದಿಯಲ್ಲಿ ಸಾಗೋಣವೇ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ಮರುತಾ ನಿನ್ನ ಮಹಿಮೆ ಪರಿ ಪರಿಯಿಂದ ತಿಳಿದು|
ಚರಿಸಿದ ಮನುಜಗೆ ದುರಿತ ಬಾಧೆಗಳ್ಯಾಕೆ|
(received in WhatsApp)
***