Showing posts with label ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ prasannavenkata ANUDINA BHAVAABDHIYALLI BHAVATARANGA RAASHIYALLI. Show all posts
Showing posts with label ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ prasannavenkata ANUDINA BHAVAABDHIYALLI BHAVATARANGA RAASHIYALLI. Show all posts

Tuesday, 9 November 2021

ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ ankita prasannavenkata ANUDINA BHAVAABDHIYALLI BHAVATARANGA RAASHIYALLI

ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ
ಮುಳುಗುತಿಹೆ ಕೈಯ ಪಿಡಿಯೊ ಜನಕ ಕೃಷ್ಣಯ್ಯ ಪ.

ಶ್ರೀನಿವಾಸ ನಿನ್ನ ಭಕ್ತಿ ಮಾಡದ 
ಅಘವಂತನೆಂದುಹೀನ ಜನರ್ಪಾಳಕಿಟ್ಟರೇನ 
ಹೇಳಲೊನೀನು ಪಾಲಿಪ ರಾಜ್ಯದಲ್ಲಜ್ಞಾನಿ 
ದೇಶಿಗನೊಬ್ಬ ಕೆಡಲುಹಾನಿ ಹೆಚ್ಚಳ 
ನಿನ್ನದಲ್ಲೆ ದೀನದಯಾಳು 1

ಚಿತ್ತವೇಗಕ್ಕವಧಿ ಇಲ್ಲ ಹೊತ್ತುಕೊಂಡು 
ಕಂಡ ಕಡೆಗೆಸುತ್ತುತಿದೆ ತನ್ನ ದಳವ ಕೂಡಿ 
ರಂಗಯ್ಯಕರ್ತನಿನ್ನ ಪಾದದೆಡೆಯೆ ಒತ್ತಿ 
ನೀನಿದನಾಳಬೇಕುಹೆತ್ತ ತಾಯಿ 
ನೀನೆ ಗಡಾನೆತ್ತಿಕೊಳ್ಳಯ್ಯ 2

ಹಳುವಗಳು ದಾರಿಕಾಣೆ ಸೆಳವಿನೊಳಾಶ್ರಯ 
ಕಾಣೆನಳಿನನೇತ್ರ ನೀನೆ ಕಾಯೊ 
ಸುಲಭರೊಡೆಯನೆಲೆಯ ತೋರಾತಂಕಹಾರಿ 
ಒಲಿದು ವರಾಭಯವ ಬೀರಿಒಲಿಯೊ 
ಪ್ರಸನ್ವೆಂಕಟಾದ್ರಿನಿಲಯ ಉದಾರಿ 3
****