Showing posts with label ನೋಡೋಣ ಬಾ ಗುರುರಾಘವೇಂದ್ರರ ಬೇಡಿದ ವರಗಳ ನೀಡುವರ gururaja vittala. Show all posts
Showing posts with label ನೋಡೋಣ ಬಾ ಗುರುರಾಘವೇಂದ್ರರ ಬೇಡಿದ ವರಗಳ ನೀಡುವರ gururaja vittala. Show all posts

Monday, 6 September 2021

ನೋಡೋಣ ಬಾ ಗುರುರಾಘವೇಂದ್ರರ ಬೇಡಿದ ವರಗಳ ನೀಡುವರ ankita gururaja vittala

 kruti by ಗುರುರಾಜವಿಠಲ 

ರಾಗ: ಕಲ್ಯಾಣಿ ತಾಳ: ಆದಿ


ನೋಡೋಣ ಬಾ ಗುರುರಾಘವೇಂದ್ರರ

ಬೇಡಿದವರಗಳ ನೀಡುವರ


ತುಂಗತುಂಗ ತರಂಗ ಶುಭಾಂಗರ

ಮಂಗಳಮಂತ್ರಾಲಯದಲ್ಲಿಹರ

ರಂಗನಮಹಿಮೆಯ ಹಿಂಗದೆನೆನೆವರ

ಸಂಗದೊಳಿರುತಲಿ ನಗುತಿಹರ 1

ಕರದೊಳುದಂಡ ಕೊರಳೊಳುತುಳಸಿ 

ಸರಸಿಜಾಕ್ಷಮಣಿಮಾಲೆಗಳು

ಸಿರಿವರನಂಘ್ರಿಯ ಹರುಷದಿಸ್ಮರಿಸುತ

ಶರಣಾಗತರನು ಪೊರೆವರ 2

ಗುರುರಾಜವಿಠಲನ ಚರಣಾಬ್ಜದಿ ಮಧು-

ಕರನತೆರೆದಿ ಸಂಚರಿಸುವವರ

ಪರಮಕರುಣಿ ಸತ್ಪರಿಮಳಕಾರರು

ಹರುಷದಿ ಹರಿಯಸ್ಮರಿಸುವರ 3

***