kruti by ಗುರುರಾಜವಿಠಲ
ರಾಗ: ಕಲ್ಯಾಣಿ ತಾಳ: ಆದಿ
ನೋಡೋಣ ಬಾ ಗುರುರಾಘವೇಂದ್ರರ
ಬೇಡಿದವರಗಳ ನೀಡುವರ ಪ
ತುಂಗತುಂಗ ತರಂಗ ಶುಭಾಂಗರ
ಮಂಗಳಮಂತ್ರಾಲಯದಲ್ಲಿಹರ
ರಂಗನಮಹಿಮೆಯ ಹಿಂಗದೆನೆನೆವರ
ಸಂಗದೊಳಿರುತಲಿ ನಗುತಿಹರ 1
ಕರದೊಳುದಂಡ ಕೊರಳೊಳುತುಳಸಿ
ಸರಸಿಜಾಕ್ಷಮಣಿಮಾಲೆಗಳು
ಸಿರಿವರನಂಘ್ರಿಯ ಹರುಷದಿಸ್ಮರಿಸುತ
ಶರಣಾಗತರನು ಪೊರೆವರ 2
ಗುರುರಾಜವಿಠಲನ ಚರಣಾಬ್ಜದಿ ಮಧು-
ಕರನತೆರೆದಿ ಸಂಚರಿಸುವವರ
ಪರಮಕರುಣಿ ಸತ್ಪರಿಮಳಕಾರರು
ಹರುಷದಿ ಹರಿಯಸ್ಮರಿಸುವರ 3
***
No comments:
Post a Comment