Monday, 6 September 2021

ಕಾಯೋ ಶ್ರೀ ಗುರುರಾಯಾ ದೇವಾ ಕಾಯೋ ಶ್ರೀ ankita vittalesha

 ankita ವಿಠಲೇಶ  

ರಾಗ: ಮಿಶ್ರ ತಾಳ: ಕವ್ವಾಲಿ


ಕಾಯೋ ಶ್ರೀ ಗುರುರಾಯಾ ದೇವಾ ಕಾಯೋ ಶ್ರೀ


ಮಂತರಮಂದಿರ ರಾಘವೇಂದ್ರರಾಯಾ

ಕಂತುಪಿತನ ಕೃಪೆ ಸಂಪದ ಶ್ರೇಯಾ

ಶಾಂತಿ ಕಡಲ ದಯವಂತ ಸುದೇವಾ

ಚಿಂತೆಯ ಪರಿಹರಿಸೆದೋ(?) ದೇವಾ ಕಾಯೋ ಶ್ರೀ 1

ತುಂಗಾತೀರದಿ ತಂಗಿದ ರಾಯಾ

ಪೊಂಗಳಲೂದುವ ರಂಗನ ಪ್ರೀಯಾ

ಇಂಗಿತಗರೆವ ಸುಮಂಗಳ ಕಾಯಾ

ಹಿಂಗಿಸೋ ತಾಪಗಳಾ ದೇವಾ ಕಾಯೋ ಶ್ರೀ 2

ಬೃಂದಾವನದೊಳು ನಿಂದಿಹ ರಾಯಾ

ಸುಂದರ ಸುರಪನ ಮಂದಿರ ಛಾಯಾ

ಕುಂದದೆ ಹರಿವಿಠಲೇಶ ಸುಧ್ಯೇಯಾ

ಬಂಧನ ಬಿಡುಗಡಿಸೋ ದೇವಾ ಕಾಯೋ ಶ್ರೀ 3

***


No comments:

Post a Comment