ಶರಣಾಗು ಸಂಪೂರ್ಣ ಶರಣಾಗು ಜಿತಾರ್ಣ
ಕರುಣಾಮೃತಾಕೀರ್ಣ ಕರ ನೀಲವರ್ಣ ಪ
ಅತಸೀ ಕುಸುಮಗಾತ್ರ ಅರವಿಂದ ನೇತ್ರ
ಚತುರಾಸ್ಯನುತ ಚಿತ್ರ ಚಾರು ಚರಿತ್ರ
ಧೃತ ಗೋವರ್ಧನ ಗೋತ್ರ ದಿವಿಜೇಂದ್ರ ಸ್ತೋತ್ರ
ಶತಯಾಗಸುತಮಿತ್ರ ಸೌಪರ್ಣಯಾತ್ರ 1
ಸ್ಮರಕೋಟಿ ಲಾವಣ್ಯ ಪುರಜಿದ್ವರೇಣ್ಯ
ಪುರುಹೂತಾದಿ ಶರಣ್ಯ ಪುರುಷಾಗ್ರಗಣ್ಯ
ದುರಿತಾಪಹರೇಣ್ಯ ದಾನ ಸಾದ್ಗುಣ್ಯ
ಪರಿಣತ ಲಾವಣ್ಯ ಪರಮಕಾರುಣ್ಯ 2
ಕಮಲರಮ್ಯವಿಲಾಸ ಕೌಸ್ತುಭೋದ್ಭಾಸ
ಕಮನೀಯ ಸುವಿಭೂಪ ಕರಪೀತವಾಸ
ಅಮಿತೇಂದು ರುಚಿಹಾಸ ಆದಿಶೇಷೋಲ್ಲಾಸ
ಸುಮನಸಪುರವಾಸ ಪಾಹಿ ಲಕ್ಷ್ಮೀಶಾ 3
****