Monday, 2 August 2021

ಶರಣಾಗು ಸಂಪೂರ್ಣ ಶರಣಾಗು ಜಿತಾರ್ಣ ankita devapura lakshmikanta

ಶರಣಾಗು ಸಂಪೂರ್ಣ ಶರಣಾಗು ಜಿತಾರ್ಣ

ಕರುಣಾಮೃತಾಕೀರ್ಣ ಕರ ನೀಲವರ್ಣ ಪ


ಅತಸೀ ಕುಸುಮಗಾತ್ರ ಅರವಿಂದ ನೇತ್ರ

ಚತುರಾಸ್ಯನುತ ಚಿತ್ರ ಚಾರು ಚರಿತ್ರ

ಧೃತ ಗೋವರ್ಧನ ಗೋತ್ರ ದಿವಿಜೇಂದ್ರ ಸ್ತೋತ್ರ

ಶತಯಾಗಸುತಮಿತ್ರ ಸೌಪರ್ಣಯಾತ್ರ 1


ಸ್ಮರಕೋಟಿ ಲಾವಣ್ಯ ಪುರಜಿದ್ವರೇಣ್ಯ

ಪುರುಹೂತಾದಿ ಶರಣ್ಯ ಪುರುಷಾಗ್ರಗಣ್ಯ

ದುರಿತಾಪಹರೇಣ್ಯ ದಾನ ಸಾದ್ಗುಣ್ಯ

ಪರಿಣತ ಲಾವಣ್ಯ ಪರಮಕಾರುಣ್ಯ 2


ಕಮಲರಮ್ಯವಿಲಾಸ ಕೌಸ್ತುಭೋದ್ಭಾಸ

ಕಮನೀಯ ಸುವಿಭೂಪ ಕರಪೀತವಾಸ

ಅಮಿತೇಂದು ರುಚಿಹಾಸ ಆದಿಶೇಷೋಲ್ಲಾಸ

ಸುಮನಸಪುರವಾಸ ಪಾಹಿ ಲಕ್ಷ್ಮೀಶಾ 3

****


No comments:

Post a Comment