ಮೃಗಮೋಹಿನಿಯೊಡನೇಕೋ ಪಂಥ ಪ
ಕಾಂತ ಸಿರಿಕಾಂತ ಸುರನಗರಾಧಿಪ ಅ-
ನಂತ ಗುಣವಂತ ದೇವಾ ಎನ್ನ ಸಲಹೊ ಅ.ಪ
ಸುಲಲಿತ ಲತಾಂಗಿ ನಿನ್ನೊಲುಮೆಯಲ್ಲಿ ನೆರೆಹೊಂಗಿ-
ಸಲೆ ಮನವ ಮಾಡಿ| ನಿನ್ನಗಲಿ ಬಾಯಾರಿ
ಬಲು ವಿರಹದಾಸರಿನ ಬೇಸರಿನಲ್ಲಿ ಯಿಂ_
ತಳಿದವಳ ಕಾಯೊ ಸಿರಿಧಾಮ ಗುಣಧಾಮ 1
ಕಳಕಳಿಪ ನೋಟ ಕಾತರಿಪ ವಿರಹದ ಹೂಟ
ಅಳಲು ಮನ ಅಳಿನಿದ್ರೆ ನಿನಗಾಲಯ ಮುದ್ರೆ
ಅಳಿದುಳಿಸು ಲಜ್ಜೆಗೇಡುಗಳ ಪಾಡುಗಳ ಇಂ-
ತುಳಿದವಳ ಕಾಯೊ ಸಿರಿಧಾಮ ಗುಣಧಾಮ 2
ಮೂರಾರವಸ್ಥೆಗಳ ನೀರಿಕಡೆಯನವಸ್ಥೆ
ಮಾತಿರುವಳೆ ಬಾಲೆ ನಿನಗೆದ್ದ ಮೇಲೆ
ನಾರಿಯೆಡೆಗೈದರಲೆಗಲಿಪ್ಪಿ ಬಿಗಿದಪ್ಪಿ ಸೊಗಸೇ
ತೋರಿಸಿದನಮರ ಪುರಿಪಾಲ ಸಿರಿಲೋಲ 3
****
No comments:
Post a Comment