Showing posts with label ನೀಲವರ್ಣ ವಿಠಲ ನಾ ನಿನ್ನ ಮೆಚ್ಚಿದೆ ಎನ್ನ ಪಾಲಿಸಯ್ಯ hayavadana NEELA VARNA VITTALA NAA NINNA MECHCHIDE ENNA PAALISAYYA. Show all posts
Showing posts with label ನೀಲವರ್ಣ ವಿಠಲ ನಾ ನಿನ್ನ ಮೆಚ್ಚಿದೆ ಎನ್ನ ಪಾಲಿಸಯ್ಯ hayavadana NEELA VARNA VITTALA NAA NINNA MECHCHIDE ENNA PAALISAYYA. Show all posts

Saturday, 6 November 2021

ನೀಲವರ್ಣ ವಿಠಲ ನಾ ನಿನ್ನ ಮೆಚ್ಚಿದೆ ಎನ್ನ ಪಾಲಿಸಯ್ಯ ankita hayavadana NEELA VARNA VITTALA NAA NINNA MECHCHIDE ENNA PAALISAYYA

ನೀಲವರ್ಣ ವಿಠಲ ನಾ ನಿನ್ನ ಮೆಚ್ಚಿದೆ 

ಎನ್ನಪಾಲಿಸಯ್ಯ ಪರಮಪಾವನ್ನ ಮೆಚ್ಚಿದೆ ಪ.

ಅರವಿಂದ ಶರಧಿ ಲೋಚನಕೆ ಭಯ ನಿನ್ನವರ ನೀಲೋತ್ಪಲದೀ ವಕ್ಷದೊಳ್ ಘಾಯಸ್ಮರನ ಧಾಳಿಗೆ ಕಡುನೊಂದೆನೊ ಪ್ರಿಯಾ ನಿನ್ನಕರುಣಕವಚವನ್ನು ತೊಡಿಸೊ ಜೀಯ 1

ಉರದ ಮೇಲಿಡು ಪಾದ ಬಾಲರವಿಯ ನಿನ್ನತರಳಲೋಚನಕೆ ಮುಖೇಂದು ಛವಿಯಗುರುಮಾಡಿ ಸಲಹಯ್ಯ ಸಿರಿದೇವಿಯ ಎನ್ನೊಡನೆವರವ[ಪಡೆವೆನು] ನಿನ್ನಂಘ್ರಿಸೇವೆಯ 2

ಮುನಿಜನ ಮನಕೆ ಸಿಲುಕದಿಪ್ಪನ ಎನ್ನಮನೆಗೆ ಬಾರೆಂಬುದುಚಿತವಲ್ಲ ನಿನ್ನಅನಿಮಿತ್ತ ಬಂಧುವೆ ನೀ ದಯಾಸಂಪನ್ನಎನ್ನಿನಿಯ ಬಾರಯ್ಯ ನೀನು ಹಯವದನ್ನ 3

***