Showing posts with label ಆವ ಪುಣ್ಯವೊ ಗೋಪಿಗಾವ ಪುಣ್ಯವೊ prasannavenkata. Show all posts
Showing posts with label ಆವ ಪುಣ್ಯವೊ ಗೋಪಿಗಾವ ಪುಣ್ಯವೊ prasannavenkata. Show all posts

Monday 18 November 2019

ಆವ ಪುಣ್ಯವೊ ಗೋಪಿಗಾವ ಪುಣ್ಯವೊ ankita prasannavenkata

ಪ್ರಸನ್ನವೆಂಕಟದಾಸರು
ಆವ ಪುಣ್ಯವೊ ಗೋಪಿಗಾವ ಪುಣ್ಯವೊ ಪ.
ಆವ ಪರಬೊಮ್ಮನಾವಾವ ಪರಿಯಲಾಡಿಸುವ ಅ.ಪ.

ಮಾರನನ್ನ ಪೆತ್ತನ ಕುಮಾರನೆಂದು ಕರೆದು ತನ್ನಮಾರ
ಬೀಸಿ ಬಿಗಿದಪ್ಪಿ ಮೋರೆ ನೋಡಿ ಮೊಲೆಯ ಕೊಡುವ1

ಕಾಲನಾಗಿ ಜಗವ ತತ್ಕಾಲದಲ್ಲಿ ನುಂಗುವಂಗೆ
ಕಾಲಮೇಲೆ ಮಲಗಿಸಿ ತ್ರಿಕಾಲದಲ್ಲಿ ಹಾಲನೆರೆವ2

ನೀತ ಪ್ರಭು ವಿಶ್ವಕೆ ವಿನೀತನಾಗಿ ಕೈಯ ಒಡ್ಡೆ
ನೀತಿ ಹೇಳಿ ನವನವನೀತವಿತ್ತು ರಂಜಿಸುವ 3

ಆನೆಗೊಲಿದು ಎಂಟುದಿಕ್ಕಿನಾನೆಯಾಳ್ದ ಅಪ್ರತಿಮ 
ದಯಾನಿಧಿಯ ಕುಳ್ಳಿರಿಸಿ ಆನೆ ಬಂತಂತಾನೆಯೆಂಬ 4

ತೋಳನೋಡುಧೈರ್ಯದೀರ್ಹತ್ತು ತೋಳಿನವನ ಹೋರುವ 
ನಳಿತೋಳವಿಡಿದು ವಾರಂವಾರ ತೋಳನ್ನಾಡೊ ಮಗನೆ ಎಂಬ 5

ತಾರಕೋಪದೇಶಕಗೆತಾರಕರಂಗನಳಲು
ತಾರಕಪತಿಯ ತೋರಿ ತಾರಕ್ಕ ಬಿಂದಿಗೆಯೆಂಬ 6

ದಟ್ಟವಾದ ಜೀವಜಾಲದಅಟ್ಟುಳಿನಿವಾರಣಂಗೆದಟ್ಟು 
ದಟ್ಟು ಎಂದು ರಂಗನ ದಟ್ಟ ಸಾಲನಿಕ್ಕಿಸುವ 7

ಚಿನ್ಮಯಾತ್ಮ ಮುಕ್ತಾಮುಕ್ತ ಚಿನ್ನರನಾಡಿಸುವಂಗೆಚಿನ್ನ 
ತಾ ಹೊನ್ನ ಗುಬ್ಬಿ ಚಿನ್ನ ಗುಬ್ಬಿಯಾಡಿಸುವ 8

ದೃಷ್ಟಾದೃಷ್ಟದೇಹಿಗಳದೃಷ್ಟ ನಿಯಾಮಕಂಗೆದೃಷ್ಟಿ 
ತಾಕಿತೆಂದು ತೆಗೆದು ದೃಷ್ಟಿ ದಣಿಯೆತುಷ್ಟಿಬಡುವ9

ಅನ್ನಮಯನು ಬ್ರಹ್ಮಾದ್ಯರಿಗೆ ಅನ್ನಕಲ್ಪತರುಪರಮಾನ್ನ 
ಚಿನ್ನಿಪಾಲಿನಿಂದ ಅನ್ನಪ್ರಾಶನ ಮಾಡಿಸುವ 10

ನಿತ್ಯತೃಪ್ತ ನಿತ್ಯಾನಂದ ನಿತ್ಯಭೋಗಿ ನಿತ್ಯತಂತ್ರನಿತ್ಯಕರ್ಮನ್ನೆತ್ತಿಕೊಂಡುನೆತ್ತಿಮೂಸಿ ಮುದ್ದಿಸುವ11

ಆ ಲಯದಲ್ಲಾಲದೆಲೆ ಆಲಯಗೆ ತೊಟ್ಟಿಲು ಉಯ್ಯಾಲೆ
ಯಿಟ್ಟು ಮುದ್ದು ಮಾತನಾಲಿಸಿ ಜೋಗುಳವ ಪಾಡುವ 12

ಅಂಜಲಿಪುಟದಿ ಸುರರಂಜಿಕೆಯ ಬಿಡಿಸುವ ನಿರÀಂಜನ
ಗಭ್ಯಂಜನಿಸಿ ಅಂಜನಿಟ್ಟುಅಮ್ಮೆಕೊಡುವ13

ಸಪ್ತ ಸಪ್ತಭುವನಜನಕೆಸುಪ್ತಿಎಚ್ಚರೀವನಿಗೆಸುಪ್ತಿಕಾಲ
ವೆಂದು ತಾನು ಸುಪ್ತಳಾಗಿ ಸ್ತನವ ಕೊಡುವ14

ತನ್ನ ಮಗನ ನಡೆಯ ನುಡಿಯ ತನ್ನ ಪತಿಗೆ ಹೇಳಿ ಹಿಗ್ಗಿತನ್ನ 
ಭಾಗ್ಯ ಲಕ್ಷ್ಮೀಶ ಪ್ರಸನ್ನವೆಂಕಟ ಕೃಷ್ಣಯೆಂಬ 15
********

Thursday 7 November 2019

ಆವ ಪುಣ್ಯವೊ ಗೋಪಿಗಾವ ಪುಣ್ಯವೊ ankita prasannavenkata

by ಪ್ರಸನ್ನವೆಂಕಟದಾಸರು
ಆವ ಪುಣ್ಯವೊ ಗೋಪಿಗಾವ ಪುಣ್ಯವೊ ಪ.

ಆವ ಪರಬೊಮ್ಮನಾವಾವ ಪರಿಯಲಾಡಿಸುವ ಅ.ಪ.

ಮಾರನನ್ನ ಪೆತ್ತನ ಕುಮಾರನೆಂದು ಕರೆದು 
ತನ್ನಮಾರಬೀಸಿ ಬಿಗಿದಪ್ಪಿ ಮೋರೆ ನೋಡಿ 
ಮೊಲೆಯ ಕೊಡುವ1

ಕಾಲನಾಗಿ ಜಗವ ತತ್ಕಾಲದಲ್ಲಿ 
ನುಂಗುವಂಗೆಕಾಲಮೇಲೆ ಮಲಗಿಸಿ 
ತ್ರಿಕಾಲದಲ್ಲಿ ಹಾಲನೆರೆವ2

ನೀತ ಪ್ರಭು ವಿಶ್ವಕೆ ವಿನೀತನಾಗಿ ಕೈಯ ಒಡ್ಡೆ
ನೀತಿ ಹೇಳಿ ನವನವನೀತವಿತ್ತು ರಂಜಿಸುವ 3

ಆನೆಗೊಲಿದು ಎಂಟುದಿಕ್ಕಿನಾನೆಯಾಳ್ದ ಅಪ್ರತಿಮ 
ದಯಾನಿಧಿಯ ಕುಳ್ಳಿರಿಸಿ ಆನೆ ಬಂತಂತಾನೆಯೆಂಬ 4

ತೋಳನೋಡುಧೈರ್ಯದೀರ್ಹತ್ತು ತೋಳಿನವನ 
ಹೋರುವ ನಳಿತೋಳವಿಡಿದು 
ವಾರಂವಾರ ತೋಳನ್ನಾಡೊ ಮಗನೆ ಎಂಬ 5

ತಾರಕೋಪದೇಶಕಗೆತಾರಕರಂಗನಳಲು
ತಾರಕಪತಿಯ ತೋರಿ ತಾರಕ್ಕ ಬಿಂದಿಗೆಯೆಂಬ 6

ದಟ್ಟವಾದ ಜೀವಜಾಲದಅಟ್ಟುಳಿನಿವಾರಣಂಗೆದಟ್ಟು 
ದಟ್ಟು ಎಂದು ರಂಗನ ದಟ್ಟ ಸಾಲನಿಕ್ಕಿಸುವ 7

ಚಿನ್ಮಯಾತ್ಮ ಮುಕ್ತಾಮುಕ್ತ ಚಿನ್ನರನಾಡಿಸುವಂಗೆಚಿನ್ನ 
ತಾ ಹೊನ್ನ ಗುಬ್ಬಿ ಚಿನ್ನ ಗುಬ್ಬಿಯಾಡಿಸುವ 8

ದೃಷ್ಟಾದೃಷ್ಟದೇಹಿಗಳದೃಷ್ಟ ನಿಯಾಮಕಂಗೆದೃಷ್ಟಿ 
ತಾಕಿತೆಂದು ತೆಗೆದು ದೃಷ್ಟಿ ದಣಿಯೆತುಷ್ಟಿಬಡುವ9

ಅನ್ನಮಯನು ಬ್ರಹ್ಮಾದ್ಯರಿಗೆ ಅನ್ನಕಲ್ಪತರುಪರಮಾನ್ನ 
ಚಿನ್ನಿಪಾಲಿನಿಂದ ಅನ್ನಪ್ರಾಶನ ಮಾಡಿಸುವ 10

ನಿತ್ಯತೃಪ್ತ ನಿತ್ಯಾನಂದ ನಿತ್ಯಭೋಗಿ ನಿತ್ಯತಂತ್ರ
ನಿತ್ಯಕರ್ಮನ್ನೆತ್ತಿಕೊಂಡುನೆತ್ತಿಮೂಸಿ ಮುದ್ದಿಸುವ11

ಆ ಲಯದಲ್ಲಾಲದೆಲೆ ಆಲಯಗೆ ತೊಟ್ಟಿಲು ಉಯ್ಯಾಲೆಯಿಟ್ಟು 
ಮುದ್ದು ಮಾತನಾಲಿಸಿ ಜೋಗುಳವ ಪಾಡುವ 12

ಅಂಜಲಿಪುಟದಿ ಸುರರಂಜಿಕೆಯ ಬಿಡಿಸುವ 
ನಿರÀಂಜನಗಭ್ಯಂಜನಿಸಿ ಅಂಜನಿಟ್ಟುಅಮ್ಮೆಕೊಡುವ13

ಸಪ್ತ ಸಪ್ತಭುವನಜನಕೆಸುಪ್ತಿಎಚ್ಚರೀವನಿಗೆ
ಸುಪ್ತಿಕಾಲವೆಂದು ತಾನು ಸುಪ್ತಳಾಗಿ ಸ್ತನವ ಕೊಡುವ14

ತನ್ನ ಮಗನ ನಡೆಯ ನುಡಿಯ ತನ್ನ ಪತಿಗೆ ಹೇಳಿ 
ಹಿಗ್ಗಿತನ್ನ ಭಾಗ್ಯ ಲಕ್ಷ್ಮೀಶ ಪ್ರಸನ್ನವೆಂಕಟ ಕೃಷ್ಣಯೆಂಬ 15
********