Showing posts with label ಕರುಣದಿಂದ ಕರವ ಪಿಡಿಯೊ ತೊರವಿ ನರಹರೆ ಶರಣಾಗತ indiresha KARUNADINDA KARAVA PIDIYO TORAVI NARAHARE SHARANAAGATA. Show all posts
Showing posts with label ಕರುಣದಿಂದ ಕರವ ಪಿಡಿಯೊ ತೊರವಿ ನರಹರೆ ಶರಣಾಗತ indiresha KARUNADINDA KARAVA PIDIYO TORAVI NARAHARE SHARANAAGATA. Show all posts

Wednesday, 3 November 2021

ಕರುಣದಿಂದ ಕರವ ಪಿಡಿಯೊ ತೊರವಿ ನರಹರೆ ಶರಣಾಗತ ankita indiresha KARUNADINDA KARAVA PIDIYO TORAVI NARAHARE SHARANAAGATA




ಕರುಣದಿಂದ ಕರವ ಪಿಡಿಯೊ ತೊರವಿ ನರಹರೆ ll ಪ ll

ಶರಣಾಗತರಮಲ ತೋರುವ ಕರುಣ ವಾರಿಧೆ ll ಅ ಪ ll

ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆ
ಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ ll 1 ll

ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳು
ಕಟಿಯ ತಟದೊಳಿಟ್ಟು ರಿಪುವ ಒಡಲ ಬಗೆದೆಯೊ ll 2 ll

ಇಂದಿರೇಶ ಎನ್ನ ಹೃದಯ ಮಂದಿರದೊಳು
ಬಂದು ತೋರೆ ಮುಖವ ನಿನ್ನ ವಂದಿಸುವೆನು ll 3 ll
*****

ಕರುಣದಿಂದ ಕರವ ಪಿಡಿಯೊ ತೊರವಿ 
ನರಹರೆಆಹಾ ತೊರವಿ ನರಹರೆ||pa||

ಶರಣಾಗತರಮಲ ತೋರುವ ಕರುಣ ವಾರಿಧೆ ||a.pa||

ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆಬಿಂಬದಂತೆ
 ಪಾಲಿಸೆನ್ನ ಸಾಂಬವಿನುತನೆ ||1||

ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳುಕಟಿಯ 
ತಟದೊಳಿಟ್ಟು ರಿಪುವ ಒಡಲ ಬಗೆದೆಯೊ ||2||

ಇಂದಿರೇಶ ಎನ್ನ ಹೃದಯ ಮಂದಿರದೊಳು ಬಂದು 
ತೋರೆ ಮುಖವ ನಿನ್ನ ವಂದಿಸುವೆನು||3||
******

ಕರುಣದಿಂದ ಕರವ ಪಿಡಿಯೊ 
ತೊರವಿ ನರಹರೆ ।। ಆಹಾ ।।
ತೊರವಿ ನರಹರೆ  ।। ಪಲ್ಲವಿ ।।

ಶರಣಾಗತರಮಲ 
ತೋರುವ ಕರುಣ 
ವಾರಿಧೆ ।। ಅ ಪ ।।
ಸ್ತಂಭಜಾತ ನಂಬಿ ನಿನ್ನ ।
ಅಂಬುಜಾತನೆ ।
ಬಿಂಬದಂತೆ ಪಾಲಿಸೆನ್ನ । 
ಸಾಂಬವಿನುತನೆ ।। ಚರಣ ।।

ಛಟಿಛಟೆಂದು ಒಡೆದು ಕಂಬ ।
ಪುಟಿದು ಸಭೆಯೊಳು ।
ಕಟಿಯ ತಟದೊಳಿಟ್ಟು - ।
ರಿಪುವ ಒಡಲ ಬಗೆದೆಯೊ ।। ಚರಣ ।।

ಇಂದಿರೇಶ ಎನ್ನ ಹೃದಯ ।
ಮಂದಿರದೊಳು ।
ಬಂದು ತೋರೆ ಮುಖವ ನಿನ್ನ 
ವಂದಿಸುವೆನು ।। ಚರಣ ।।
****

ರಚನೆ :
ಶ್ರೀ ಹುಚ್ಚಾಚಾರ ಪಾಂಡು ರಂಗಿ
ಅಂಕಿತ : ಇಂದಿರೇಶ

ಬಾರೋ ನಮ್ಮ ಮನೆಗೆ 
ಶ್ರೀ ಗುರುವರ ।। ಪಲ್ಲವಿ ।।

ಬಾರೋ ನಮ್ಮನೆಗೀ -
ರಸಮಯ ವಿಚಾರ ।
ಪರ ಸಕಳಾರ್ಯ -
ಸೇವಿತ ।। ಅ ಪ ।।

ರಾಮ ಲಕ್ಷ್ಮಣ 
ಕಾಮಿನಿ ಶ್ರಿತ ಕಾಮ ।
ಮಳಾತ್ಮ ಸುಧಾಮ 
ರಾಜಿತ ।। ಚರಣ ।।

ಎಷ್ಟೋ ಮಾನವ-
ರೆಷ್ಟೋ ಸೇವಿಸು ।
ತುಷ್ಟ ಭೂತಿ ವಿ-
ಶಿಷ್ಟ ರಾದರೂ ।। ಚರಣ ।।

ಸೌಧ ಭಾವ ವಿ-
ಬೋಧ ಪರಿಮಳ ।
ಸಾದಿ ಭೂಪ ಪ್ರ-
ಸಾದ ಪೂರಿತ ।। ಚರಣ ।।

ನಿಮ್ಮ ದರ್ಶನ 
ಶರ್ಮ ಸಾಧನ ।
ಧರ್ಮ ಮಮ ಪ್ರತಿ 
ಜನ್ಮನಿಸ್ಯಾತ್ ।। ಚರಣ ।।

ಬಂದು ನೀ ನಮಾ-
ಗೆಂದು ಕೇಳಿದೆ ।
ಇಂದಿರೇಶನ 
ತಂದು ತೋರಿಸು ।। ಚರಣ ।।
***