ನಿತ್ಯ ನಿಗಮನಿಕರ ನಿಶ್ಚಿತ ನಿರ್ಮಲ ನಿನ್ನವನ್ನ
ಸತ್ಯಸಂಧ ಹಯವದನ್ನ ಸಲಹಬೇಕೆನ್ನ ಪ.
ಉದಧಿಸುತೆಯ ಉರÀದಿ ಧರಿಸಿ ಉತ್ತಮೋತ್ತಮಸುಧೆಯನುಣಿಸಿ ಸುರರ ಪೊರೆದೆ ಸುಜನ ಸುಖಕÀರಮಧುರವಚನ ಮಾನ್ಯರಚನ ಮೃತ್ಯುಮೋಚನಕದನಕರ್ಕಶ ಕಲಿಮಲಘÀ್ನ ಕಮಲಲೋಚನ 1
ಮಂಗಳಾಂಗ ಮಧ್ಯರಹಿತ ಮದನಮೋಹನಕಣ್ಗೆ ಎನಗೆ ಕಾಣಿಸು ನಿನ್ನ ಕಾಯಕಾಂತಿಯಭಂಗರಹಿತ ಭವ್ಯಚರಿತ ಭಯಕೆ ಭಯಹರರಂಗರಾಯ ರಸಿಕರರಸ ರಕ್ಷಿಸಬೇಕೆನ್ನ 2
ಮಧುಕೈಟಭರ ಮರ್ದಿಸಿ ಮತಿಯ ಮಗಗಿತ್ತನಅದರಿಂದ ಅಮರರೆಲ್ಲ ಅರಿತುಕೊಂಡರುಇದಿರುಗೊಂಡು ಇವನ ನೋಡಿ ಇರವ ಮರೆತರುಹೃದಯಸದನ ಹಯವದನ್ನ ಹೊರೆಯಬೇಕೆನ್ನ 3
***