ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹು ಸಲಹು ಸಲಿಲಜಾಂಬಕ ಸಲಹು ತ್ರಿಭುವನ ಜೀವನಾ| ವಿನುತ ಪದಪಾವನಾ| ನೆಲಿಗೆ ಪಡೆದಿಹೆ ಕಾವನಾ| ಸುಲಭನಾಗ್ಯತಿ ಸಲಿಸುತಿರುತಿಹ|ಒಲಿದು ಭಕ್ತರ ಭಾವನಾ 1
ಕರವ ದರಿತು ಶರಣವ ಬಂದೆನಾ| ಕೊರತೆ ನೋಡದೆ ಹಿಂದಿನಾ| ಅರಹು ಮತಿಯಲಿ ಮಂದನಾ| ಹರಿಯ ಸಾರ್ಥಕ ನರಜನುಮವನು | ಭರದಿ ಮಾಡು ನೀ ಇಂದಿನಾ 2
ಪತಿ ಸಖಗತಿಗೆಳೆಯ ಸುತ|ಪಿತನ ಪರಿಯಲಿ ಲಾಲಿಸಿ| ಶೃತಿ ವಿಹಿತ ತವ ಸ್ತುತಿಸ್ತವ ಪಾಡುತಿಹೆ ನೆರೆಯಲಿ ಬಾಳಸೀ| ಹಿತವನರಿಯದ ಮತಿ ವಿಹೀನೋ|ನ್ಮತರ ಸಂಗವ ಜಾಳಿಸೀ| ಪತಿತನು ದ್ಧರಿಸ್ಸತುಳ ಮಹಿಪತಿ | ಸುತ ಪ್ರಭುವೇ ದಯಪಾಲಿಸಿ 3
***