Showing posts with label ನಾಲಗೆ ನಾಲಗೆ ನಾಲಗೆ ಸಿರಿ purandara vittala. Show all posts
Showing posts with label ನಾಲಗೆ ನಾಲಗೆ ನಾಲಗೆ ಸಿರಿ purandara vittala. Show all posts

Thursday, 5 December 2019

ನಾಲಗೆ ನಾಲಗೆ ನಾಲಗೆ ಸಿರಿ purandara vittala

ಪುರಂದರದಾಸರು
ನಾಲಗೆ ನಾಲಗೆ ನಾಲಗೆ ಸಿರಿ - |ಲೋಲನ ನೆನೆ ಕಾಣೊ ನಾಲಗೆ ಪ.

ವಾಸುದೇವನ ನಾಮ ನಾಲಗೆ - ನೀಲೇಸಾಗಿ ನೆನೆ ಕಾಣೊ ನಾಲಗೆ ||ಆಸೆಯೊಳಗೆ ಬಿದ್ದು ಮೋಸ ಹೋಗಲು ಬೇಡ |ಕೇಶವನ ನಾಮವ ನೆನೆ ಕಾಣೊ ಮರುಳೆ 1

ಮಾತನಾಡುವಲ್ಲಿ ನಾಲಗೆ - ನೀ ಅ - |ನೀತಿ ನುಡಿಯದಿರು ನಾಲಗೆ ||ಆತನ ನಾಮವ ಗೀತದಿ ಪಾಡುತ |ಸೀತಾಪತಿ ರಘುನಾಥನ ನೆನೆ ಕಾಣೊ 2

ಅಚ್ಯುತನಾಮವ ನಾಲಗೆ ನೀ - |ಬಿಚ್ಚಿಟ್ಟ ನೆನೆ ಕಾಣೊ ನಾಲಗೆ ||ನೆಚ್ಚಿ ಕೆಡಲಿ ಬೇಡನಿಚ್ಚ ಶರೀರವ |ಅಚ್ಯುತನಾಮವ ನೆನೆ ಕಾಣೊ ಮರುಳೆ 3

ನನ್ನದು ತನ್ನದು ನಾಲಗೆ - ನೀ- |ನೆನ್ನದಲಿರು ಕಾಣೊ ನಾಲಗೆ |ಇನ್ನು ಮೂರು ದಿನದೀ ಸಂಸಾರದಿ |ಪನ್ನಗಶಯನನ ನೆನೆ ಕಾಣೊ ಮರುಳೆ 4

ಅನುದಿನ ಹರಿನಾಮ ನಾಲಗೆ - ನೀ|ನೆನೆಯುತಿರು ಕಾಣೊ ನಾಲಗೆ ||ಘನಮಹಿಮ ನಮ್ಮ ಪುರಂದರವಿಠಲನ |ಕ್ಷಣ ಕ್ಷಣಕೊಮ್ಮೆ ನೆನೆ ಕಾಣೊ ಮರುಳೆ 5
***

pallavi

nAlage nAlage nAlage siri lOlana nene kANo nAlage

caraNam 1

vAsudEvana nAma nAlage nI alEsgi nene kANo nAlage AseyoLage
biddu mOsa hOgalu bEDa kEshavana nAmava nene kANo maruLe

caraNam 2

mAtADuvalli nAlage nI anIti nuDiyadiru nAlage
Atana nAmava gItadi pADuta sItApati raghunAthana nene kANo

caraNam 3

acyuta nAmava nAlage nI bicciTTu nene kANo nAlage
necci keDali bEDanicca sharIrava acyuta nAmava nene kANo maruLe

caraNam 4

nannadu tannadu nAlage nInennadaliru kANo nAlage
innu mUru dinadi samsAradi pannaga shyanana nene kANo maruLe

caraNam 5

anudina harinAma nAlage nI neneyutaliru kANo nAlage ghana
mahima purandara viTTalana kSaNa kSaNakomme nene kANo maruLe
***